ಉಡುಪಿ: ಮಾರ್ಚ್ 15 ರಂದು ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ ನಡೆಯಲಿದೆ.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ,ಬಸ್ ,ಕ್ಯಾಬ್ ,ಟ್ಯಾಕ್ಸಿ ಚಾಲಕ, ಮಾಲಕರು ಈ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ.ಆದರೆ ತಾನು ಆ ಪಾದಯಾತ್ರೆಗೆ ಹೋಗುವುದಿಲ್ಲ ಎಂದು ಆಸಿಫ್ ಆಪದ್ಬಾಂಧವ ಪಬ್ಲಿಕ್ ನೆಕ್ಸ್ಟ್ ಗೆ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಆಸಿಫ್ ಆಪದ್ಬಾಂಧವ ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಧರಣಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.ಇದೀಗ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪಾದಯಾತ್ರೆ ಹಮ್ಮಿಕೊಂಡಿದ್ದು, ನನ್ನನ್ನು ಬರಬೇಡಿ ಎಂದು ಹೇಳಿದ್ದಾರೆ. ಹೋರಾಟಕ್ಕೆ ನನ್ನ ಬೆಂಬಲ ಇದೆ.ನನ್ನ ಕಡೆಯವರೂ ಕೂಡ ಭಾಗವಹಿಸುತ್ತಾರೆ.ಆದರೆ ನಾನು ಆ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. ಒಟ್ಟಾರೆ ಸುರತ್ಕಲ್ ನ ಅನಧಿಕೃತ ಟೋಲ್ ಗೇಟ್ ತೆರವುಗೊಂಡರೆ ಅದೇ ಖುಷಿ ಎಂದು ಹೇಳಿದ್ದಾರೆ.
Kshetra Samachara
12/03/2022 02:45 pm