ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸರಕಾರದಿಂದ ಮೂಲಭೂತ ಸೌಕರ್ಯಗಳಿಗೆ ಒತ್ತು: ಉಮನಾಥ ಕೋಟ್ಯಾನ್

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ಸಭಾಭವನದಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.

ಶಾಸಕ ಉಮಾನಾಥ ಕೋಟ್ಯಾನ್ ಹಕ್ಕು ಪತ್ರ ವಿತರಿಸಿ ಮಾತನಾಡಿ ಸರಕಾರ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುತ್ತಿದ್ದು ಸೂರು ಇಲ್ಲದ ಕಡುಬಡವರಿಗೆ ಸೂರು ಕಲ್ಪಿಸಲು ಬದ್ದವಾಗಿದ್ದು ಇದಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದರು

ಮುಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಕಾಣುತ್ತಿದ್ದು ನೇಮಕಕ್ಕೆ ಈಗಾಗಲೇ ಸಚಿವರ ಬಳಿ ಮಾತನಾಡಿದ್ದು ಕಾರ್ಯಗತಗೊಳಿಸುವ ನಿರೀಕ್ಷೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷ ಸತೀಶ್ ಅಂಚನ್, ಸ್ಥಾಯಿ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್, ಮುಲ್ಕಿ ತಹಶಿಲ್ದಾರ್ ಕಮಲಮ್ಮ, ನಗರ ಪಂಚಾಯತ್ ಸದಸ್ಯರಾದ ವಿಮಲ ಪೂಜಾರಿ, ಪುತ್ತು ಬಾವ, ಮಂಜುನಾಥ ಕಂಬಾರ, ಬಾಲಚಂದ್ರ ಕಾಮತ್, ದಯಾವತಿ ಅಂಚನ್, ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು

ಸುಮಾರು 24 ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು. ಆರೋಗ್ಯಾಧಿಕಾರಿ ರಾಜೇಶ್ ಸ್ವಾಗತಿಸಿದರು. ಕಂದಾಯ ಅಧಿಕಾರಿ ಅಶೋಕ್ ಧನ್ಯವಾದ ಅರ್ಪಿಸಿದರು.

Edited By : Manjunath H D
Kshetra Samachara

Kshetra Samachara

25/09/2021 04:25 pm

Cinque Terre

6.65 K

Cinque Terre

0

ಸಂಬಂಧಿತ ಸುದ್ದಿ