ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಕಡಲ್ಕೊರೆತ ಸ್ಥಳಗಳಿಗೆ ಸಿಎಂ ಭೇಟಿ ತುರ್ತು ಕಾಮಗಾರಿಗೆ ಸೂಚನೆ

ಬೈಂದೂರು: ಮರವಂತೆ ಕಡಲ ಕೊರೆತ ಪ್ರದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿ, ತುರ್ತು ಕಾಮಗಾರಿಗಾಗಿ ಹಣ ಬಿಡುಗಡೆಗೆ ಸೂಚನೆ ನೀಡಿದರು.

ನಂತರ ಮಾಧ್ಯಮದ ಜೊತೆ ಮಾತನಾಡಿದ ಸಿ.ಎಂ ಇಲ್ಲಿನ ಕಡಲ ಕೊರತೆ ನೋಡಿದ್ದೇನೆ. ಪ್ರತೀ ವರ್ಷ ಇಲ್ಲಿ ಕಡಲ ಕೊರತೆಯಾಗುತ್ತಿದೆ. ಇದಕ್ಕೆ ತಾತ್ಕಾಲಿಕ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭ ಮಾಡಲಾಗುವುದು. ನಂತರ ಶಾಶ್ವತ ಕಾಮಗಾರಿ ನಡೆಸಲು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಬೈಂದೂರು, ಕುಂದಾಪುರ ಕರಾವಳಿ ಭಾಗದ ಸಂತ್ರಸ್ತರಿಂದ ಸಿಎಂಗೆ ಅಹವಾಲು ಸಲ್ಲಿಕೆ ಮಾಡಲಾಯಿತು. ತಾವು ಪ್ರತಿ ಮಳೆಗಾಲದಲ್ಲಿ ಅನುಭವಿಸುವ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಮರುವಂತೆ ಹಾಗೂ ನಾವುಂದ ಭಾಗದ ಸ್ಥಳೀಯರು ಕಳಕಳಿಯ ಮನವಿ ಮಾಡಿದರು.

ಸಿಎಂ ಜೊತೆ ಕಂದಾಯ ಸಚಿವ ಆರ್.ಅಶೋಕ್, ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ತಹಶೀಲ್ದಾರ್ ಕಿರಣ್ ಗೊರೆಯ್ಯ, ಬೈಂದೂರು ಮಂಡಲ ಕ್ಷೇತ್ರ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ : ದಾಮೋದರ ಮೊಗವೀರ ನಾಯಕವಾಡಿ.

Edited By : Somashekar
Kshetra Samachara

Kshetra Samachara

13/07/2022 07:04 pm

Cinque Terre

11.96 K

Cinque Terre

2

ಸಂಬಂಧಿತ ಸುದ್ದಿ