ಉಡುಪಿ: ಉಡುಪಿಯ ನಗರಾಡಳಿತವನ್ನು ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿದ್ದಾರೆ. ಇದಕ್ಕೆ ಕಾರಣ ದೇಶದಲ್ಲಿ ಬಿಜೆಪಿಗೆ ಅಧಿಕಾರದ ಮೊದಲ ಅವಕಾಶ ನೀಡಿದ ನಗರ ಉಡುಪಿ ಎಂಬುದು. ಇದನ್ನು ಇಂದು ನೆನಪಿಸಿಕೊಂಡಿರುವ ಪ್ರಧಾನಿ ಮೋದಿ, ದಶಕಗಳ ಹಿಂದಿನ ಉಡುಪಿ ನಗರಾಡಳಿತದ ಗುಣಮಟ್ಟವನ್ನು ಹಾಡಿ ಹೊಗಳಿದರು.
ಗುಜರಾತ್‌ನಲ್ಲಿ ಮೇಯರ್ ಮತ್ತು ಉಪಮೇಯರ್‌ಗಳ ಸಮ್ಮೇಳನ ನಡೆಯುತ್ತಿದ್ದು, ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಜನಸಂಘ ಕಾಲದ ವಿಚಾರ ತಿಳಿದಿದ್ದವರಿಗೆ ಗೊತ್ತಿರಬಹುದು. ಕರ್ನಾಟಕ ರಾಜ್ಯದ ಉಡುಪಿ ಪುರಸಭೆಯಲ್ಲಿ ಆಡಳಿತ ನಡೆಸುವ ಅಧಿಕಾರವನ್ನು ಅಲ್ಲಿನ ಜನತೆ ಅನೇಕ ಬಾರಿ ಜನ ಸಂಘಕ್ಕೆ ನೀಡಿದ್ದರು. ಆ ವೇಳೆ ನಗರಾಡಳಿತ ಸಂಸ್ಥೆಗಳ ಸ್ಪರ್ಧೆಯಲ್ಲಿ ಯಾವತ್ತೂ ಉಡುಪಿ ಪ್ರಥಮ ಸ್ಥಾನ ಕಾಯ್ದುಕೊಳ್ಳುತ್ತಿತ್ತು. ಜನಸಂಘ ಕಾಲದ ನಮ್ಮ ಕಾರ್ಯಕ್ಷಮತೆಯ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂದಿದ್ದಾರೆ.
ನಗರದ ಜನತೆ ಅಂದು ಉತ್ತಮವಾದ ಆಡಳಿತ ನೀಡಿದ್ದರಿಂದ ಈಗಲೂ ಬಿಜೆಪಿ ಆಡಳಿತದ ಮೂಲಕ ನಿರಂತರವಾಗಿ ಪ್ರಥಮ ಸ್ಥಾನ ಪಡೆದು ಜನ ಮೆಚ್ಚುಗೆಯನ್ನು ಗಳಿಸುತ್ತಿದೆ ಎಂದು ಶ್ಲಾಘಿಸಿದ್ದಾರೆ.ಇದು ಪಕ್ಷದ ಮೇಲೆ ಉಡುಪಿ ನಗರದ ಜನ ಇಟ್ಟಿರುವ ಅಚಲ ವಿಶ್ವಾಸ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
PublicNext
20/09/2022 08:35 pm