ಮಂಗಳೂರು: ನಗರದ ಸುರತ್ಕಲ್ ಎನ್ಐಟಿಕೆಯ ಅಕ್ರಮ ಟೋಲ್ ಗೇಟ್ ತೆರವು ದಿನಾಂಕವನ್ನು ಘೋಷಿಸಲು ಒತ್ತಾಯಿಸುವಂತೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಟೋಲ್ ಗೇಟ್ ಮುಂಭಾಗ ನಡೆಸುತ್ತಿರುವ ಧರಣಿಯ ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಲಿಂಗೇಗೌಡ ಭೇಟಿ ನೀಡಿದ್ದಾರೆ. ಈ ವೇಳೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಮನವಿಯನ್ನು ಸ್ವೀಕರಿಸಿದರು.
ಈ ವೇಳೆ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಲಿಂಗೇಗೌಡ ಮಾತನಾಡಿ, ಟೋಲ್ ಗೇಟ್ ನ ತೆರವಿನ ಬಗ್ಗೆ ಪೇಪರ್ ವರ್ಕ್ ನಡೆಯುತ್ತಿದೆ. 20 ದಿನಗಳಿಂದ ಗರಿಷ್ಠ ಒಂದು ತಿಂಗಳೊಳಗೆ ಸುರತ್ಕಲ್ ಟೋಲ್ ತೆರವು ಆಗಲಿದೆ ಎಂದು ಭರವಸೆ ನೀಡಿದರು. ಆದರೆ ತೆರವು ಮಾಡುವ ನಿರ್ದಿಷ್ಟ ದಿನಾಂಕ ಘೋಷಣೆ ಮಾಡಿಲ್ಲ.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಮಾತನಾಡಿ, ಟೋಲ್ ಗೇಟ್ ತೆರವಿನ ನಿರ್ದಿಷ್ಟ ದಿನಾಂಕವನ್ನು ಪ್ರಕಟಿಸಲು ಹೆದ್ದಾರಿ ಪ್ರಾಧಿಕಾರ ಸಿದ್ಧವಿಲ್ಲ. ಆದರೆ ತಿಂಗಳೊಳಗೆ ಟೋಲ್ ಗೇಟ್ ಖಂಡಿತಾ ತೆರವುಗೊಳ್ಳುತ್ತದೆಂಬ ಭರವಸೆ ನೀಡುತ್ತಿದ್ದೀರಿ. ಆದರೆ ಭರವಸೆಯನ್ನು ನಾವು ನಂಬುವುದಿಲ್ಲ. ಆದ್ದರಿಂದ ಗಡುವಿನೊಳಗೆ ಟೋಲ್ ತೆರವು ಆಗದಿದ್ದಲ್ಲಿ ಅಕ್ಟೋಬರ್ 18 ರಂದು ನೂರಾರು ಸಂಘಟನೆಗಳ ಸಾವಿರಾರು ಜನರು ಅಕ್ರಮ ಟೋಲ್ ಗೇಟ್ ತೆರವು ನಡೆಸಿಯೇ ತೀರುತ್ತಾರೆ ಎಂದು ಘೋಷಿಸಿದರು.
Kshetra Samachara
13/09/2022 07:24 pm