ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ನೂತನ ಮಿನಿ ವಿಧಾನಸೌಧಕ್ಕೆ ಕಂದಾಯ ಸಚಿವರಾದ ಆರ್. ಅಶೋಕ್ ಗುದ್ದಲಿ ಪೂಜೆ ನಡೆಸಿದರು. ಉಡುಪಿ ತಾಲೂಕಿನಲ್ಲಿದ್ದ ಕಾಪು ಹೊಸ ತಾಲೂಕು ರಚನೆ ವೇಳೆ ಅಸ್ಥತ್ವಕ್ಕೆ ಬಂದಿತ್ತು. ತಾಲೂಕು ಬಡ್ತಿಯ ಬಳಿಕ ತಾಲೂಕು ಕೇಂದ್ರದ ಅತೀ ಮುಖ್ಯ ಕಛೇರಿಗಳಿಗಾಗಿ ಮಿನಿ ವಿಧಾನ ಸೌಧದ ಬೇಡಿಕೆ ಇತ್ತು.
ಇಂದು ಶುಭ ಮಹೂರ್ತದಂದು ಹೊಸ ತಾಲೂಕಿನ ಮಿನಿ ವಿಧಾನ ಸೌಧದ ಗುದ್ದಲಿ ಪೂಜೆ ಶಾಸ್ತ್ರೋಕ್ತವಾಗಿ ನಡೆಯಿತು. ಈ ಸಂದರ್ಭದಲ್ಲಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್, ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ ಜಗದೀಶ್, ಸಹಾಯಕ ಆಯುಕ್ತ ರಾಜು ಕೆ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್ ಉಪಸ್ಥಿತರಿದ್ದರು.
Kshetra Samachara
25/01/2021 07:09 pm