ಸುರತ್ಕಲ್: ಸುರತ್ಕಲ್ ಸಮೀಪದ ಮುಕ್ಕ ಚೆಕ್ ಪೋಸ್ಟ್ ಬಳಿಯ ಶ್ರೀ ಸಾಯಿ ಫ್ರೆಂಡ್ಸ್ ಸರ್ಕಲ್ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮುಕ್ಕದ ಶ್ರೀ ಸಾಯಿ ಸಂಘದಲ್ಲಿ ನಡೆದ ರಕ್ತದಾನ ಶಿಬಿರವನ್ನು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಉದ್ಘಾಟಿಸಿದರು.
ಈ ಸಂದರ್ಭ ಅವರು ಮಾತನಾಡಿ ರಕ್ತದಾನ ಶ್ರೇಷ್ಠ ದಾನ ವಾಗಿದ್ದು ಮನುಷ್ಯನ ಜೀವ ಉಳಿಸಲು ಪ್ರಾಮುಖ್ಯವಾಗಿದೆ ಎಂದರು.
ಶಿಬಿರದಲ್ಲಿ ಸ್ಥಳೀಯ ಕಾರ್ಪೊರೇಟರ್ ಶೋಭಾ ರಾಜೇಶ್, ಶ್ರೀ ಸಾಯಿ ಫ್ರೆಂಡ್ಸ್ ಸರ್ಕಲ್ ಪದಾಧಿಕಾರಿಗಳು, ಪ್ರಮುಖರು, ವೆನ್ಲಾಕ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ಗಣ್ಯರು ಉಪಸ್ಥಿತರಿದ್ದರು.
Kshetra Samachara
02/01/2022 10:27 pm