ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗಡಿಜಿಲ್ಲೆಗಳಿಗೆ ಹೆಚ್ಚಿನ ಲಸಿಕೆ ಪೂರೈಕೆ: ಸಿಎಂ ಭರವಸೆ

ಮಂಗಳೂರು: ಕೊರೋನ ನಿಯಂತ್ರಿಸುವ ಹಿನ್ನೆಲೆಯಲ್ಲಿ ಗಡಿಜಿಲ್ಲೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿ ತರಲಾಗುತ್ತದೆ. ಕೊರೋಣ ಮತ್ತೆ ಉಲ್ಬಣವಾಗಿ ಲಾಕ್ ಡೌನ್ ಮಾಡುವುದು ನನಗೆ ಇಷ್ಟ ಇಲ್ಲ. ಹೀಗಾಗಿ ಈ ವಿಚಾರವನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು, ಗಡಿ ಮೂಲಕ ಬರುವ ಎಲ್ಲರನ್ನು ತಪಾಸಣೆ ಮಾಡಬೇಕು. ಈಗಾಗಲೇ ಈ ಕುರಿತು ಸಲಹೆಗಳನ್ನು ನೀಡಿದ್ದು ವೆಂಟಿಲೇಟರ್, ಬೆಡ್, ಆಕ್ಸಿಜನ್ ಸಮಸ್ಯೆಯಾಗದಂತೆ ಸೂಚನೆ ನೀಡಿದ್ದೇನೆ. ಇನ್ನು ಎಲ್ಲಿ ಕೇಸ್ ಜಾಸ್ತಿಯಾಗಿದೆ ಅಲ್ಲಿ ಹೆಚ್ಚಿನ ನಿಗಾ ವಹಿಸಲು ಸೂಚನೆ ನೀಡಿದ್ದೀನಿ ಅಂದ್ರು. ಇನ್ನು ಮುಂದಿನ ವಾರ ಇನ್ನಷ್ಟು ಲಸಿಕೆ ಬರಲಿದ್ದು ಗಡಿಜಿಲ್ಲೆಗಳಿಗೆ ಹೆಚ್ಚು ಲಸಿಕೆ ಪೂರೈಸುವಂತೆ ಸೂಚನೆ ನೀಡಿದ್ದೇನೆ ಅಂದ್ರು.

Edited By : Nagesh Gaonkar
Kshetra Samachara

Kshetra Samachara

12/08/2021 08:11 pm

Cinque Terre

55.54 K

Cinque Terre

1

ಸಂಬಂಧಿತ ಸುದ್ದಿ