ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ದೇಶದ ಯುವ ಜನತೆ ಐಕ್ಯತೆ ಸಾಮರಸ್ಯದಿಂದ ಸಂಘಟಿತರಾಗಿ ಬಾಳಬೇಕು: ಅಭಯ ಚಂದ್ರ ಜೈನ್

ಮುಲ್ಕಿ: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ಯುವ ನಾಯಕ ಮಿಥುನ್ ರೈ ನೇತ್ರತ್ವದಲ್ಲಿ ಮೂಡಬಿದ್ರೆ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಭಾನುವಾರ ಬೆಳಿಗ್ಗೆ ಹೊರಟ ಬೃಹತ್ ಬೈಕ್ ಜಾಥಾವು ಸಂಜೆ ಮುಲ್ಕಿಯಲ್ಲಿ ಸಮಾಪನಗೊಂಡಿತು.

ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಜಾತಿ ಭೇಧ ಮರೆತು ಜನರು ಧುಮುಕಿದ ಪರಿಣಾಮ ನಮಗೆ ಸ್ವಾತಂತ್ರ್ಯ ಲಭಿಸಿದೆ. ದೇಶದ ಯುವ ಜನತೆ ಐಕ್ಯತೆ ಸಾಮರಸ್ಯದಿಂದ ಸಂಘಟಿತರಾಗಿ ಬಾಳಬೇಕು ಎಂಬ ಧ್ಯೇಯದೊಂದಿಗೆ ಬೈಕ್ ಜಾಥಾ ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದ ರೂವಾರಿ ಯುವ ನಾಯಕ ಮಿಥುನ್ ರೈ ಮಾತನಾಡಿದರು. ಈ ಸಂದರ್ಭ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ ಬೆರ್ನಾಡ್ ಮತ್ತಿತರರು ಹಾಜರಿದ್ದರು.

Edited By : Somashekar
Kshetra Samachara

Kshetra Samachara

28/08/2022 08:15 pm

Cinque Terre

15.44 K

Cinque Terre

1

ಸಂಬಂಧಿತ ಸುದ್ದಿ