ಕಾಪು: ಕಾಪು ಪುರಸಭೆಯಲ್ಲಿ ಏಕಾಏಕಿ ತೆರಿಗೆ ಏರಿಸುವುದರ ವಿರುದ್ಧ ಕಾಪು ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಮಾಜಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಪುರಸಭೆಯ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಜಮಾಯಿಸಿ ಪ್ರತಿಭಟಿಸಿದರು.
ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು,ಕೊರೊನಾ ಕಾಟಕ್ಕೆ ವಿಶ್ವವೇ ನಲುಗಿಹೋಗಿದೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಕಾಪು ಪುರಸಭೆ ಯಾವುದೇ ಮಾನವೀಯತೆ ತೋರದೆ ಎಲ್ಲಾ ವಿಧದ ತೆರಿಗೆಗಳನ್ನು ಏರಿಸಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
15/10/2020 05:24 pm