ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಮೈಲೊಟ್ಟು ಅಂಗನವಾಡಿಗೆ ದಾನಿಗಳಾದ ಶಿಮಂತೂರು ಗ್ರಾಮದ ಕಾಂತಿಲತಾ ಶೆಟ್ಟಿಯವರು ನೀಡಿದ ಸ್ಲೇಟು ಮತ್ತು ಪೆನ್ಸಿಲ್ ಸಹಿತ ಬಳಪದ ಸಾಮಾಗ್ರಿಗಳನ್ನು ಕೃಷಿಕ ರತ್ನಾಕರ ಕೋಟ್ಯಾನ್ ವಿತರಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಮನೋಹರ ಕೋಟ್ಯಾನ್ ಮಾತನಾಡಿ ಕೊರೊನಾ ಸಂಕಷ್ಟದ ದಿನಗಳಲ್ಲಿ ಸರಕಾರಿ ಶಾಲೆ ಹಾಗೂ ಅಂಗನವಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿರುವ ದಾನಿಗಳ ಕಾರ್ಯ ಶ್ಲಾಘನೀಯ ಎಂದರು
ಅಂಗನವಾಡಿ ಕಾರ್ಯಕರ್ತೆ ಮಮತಾ, ಶಾಲಾ ಶಿಕ್ಷಕರಾದ ಹೇಮಲತಾ, ನಳಿನಿ, ಶಾಲಾ ಮಕ್ಕಳು, ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
07/01/2022 03:55 pm