ಉಡುಪಿ: ಬಿಜೆಪಿ ಆಡಳಿತ ವೈಫಲ್ಯ ಮರೆಮಾಚಲು ಹಿಜಾಬ್ ವಿವಾದವನ್ನು ಮುನ್ನೆಲೆಗೆ ತಂದಿದೆ.ಗೇಟಲ್ಲಿ ಪೊಲೀಸರು ನಿಂತು ವಿದ್ಯಾರ್ಥಿನಿಯರನ್ನು ಬೆದರಿಸುವುದು ಅಕ್ಷಮ್ಯ ಅಪರಾಧ ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.
ಉಡುಪಿಯ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,ಪೊಲೀಸ್ ಮಹಾನಿರ್ದೇಶಕರು ತಕ್ಷಣ ಮಧ್ಯಪ್ರವೇಶ ಮಾಡಿ ಸೂಚನೆ ನೀಡಬೇಕು.ಹೆಣ್ಣುಮಕ್ಕಳ ಬಟ್ಟೆಯನ್ನು ರಸ್ತೆಯಲ್ಲಿ ಬಿಚ್ಚಿಸಬೇಡಿ.ಅದನ್ನವರು ಕಾಲೇಜಿನಲ್ಲಿ ತೆಗೆಯಲಿ.ತರಗತಿಗೆ ಬಿಡುವುದು,ಬಿಡದಿರುವುದು ಕಾಲೇಜಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ನಡುಬೀದಿಯಲ್ಲಿ ಬುರ್ಖಾ ಬಿಚ್ಚಿಸುವುದು ಸರಿಯೇ? ಎಂದು ಪ್ರಶ್ನಿಸಿದ ಅವರು,ರಘುಪತಿ ಭಟ್ ಶಾಸಕರಾಗಲು ಅನರ್ಹ.ನಮಗೆ ಪಾಠ ಮಾಡಲು ನೀವು ಬರಬೇಡಿ.ನಿಮ್ಮ ಪಲ್ಲಂಗದ ಆಟ ನೋಡಿ ಬಂದಿದ್ದೇವೆ.ವಿದ್ಯಾರ್ಥಿಗಳ ಜೀವನದ ಜೊತೆ ಆಟ ಆಡಬೇಡಿ.ರಘುಪತಿ ಭಟ್ ಒಬ್ಬ ಅಜ್ಞಾನಿ ಶಾಸಕ ಎಂದು ವಾಗ್ದಾಳಿ ನಡೆಸಿದರು.ಬಿಜೆಪಿ ರಾಜ್ಯಾದ್ಯಕ್ಷರು ಮತ್ತು ಸಿಎಂ ಬೊಮ್ಮಾಯಿ ಶಾಸಕರ ರಾಜೀನಾಮೆ ಪಡೆಯಬೇಕು ಎಂದು ಹೇಳಿದರು.
PublicNext
17/02/2022 07:04 pm