ಮುಲ್ಕಿ: ಯಕ್ಷಗಾನ ಕ್ಷೇತ್ರದಲ್ಲಿ ಗಣೇಶ್ ಕೊಲಕಾಡಿ ರವರ ಸಾಧನೆ ಅದ್ಮಿತಿಯವಾಗಿದ್ದು ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದೆ ಇದು ಅವರ ಸಾಧನೆಗೆ ಹಿಡಿದ ಗರಿಮೆ ಅವರು ಆದಷ್ಟು ಬೇಗ ಗುಣಮುಖರಾಗಿ ಇನ್ನಷ್ಟು ಸಾಧನೆ ಮಾಡಲಿ. ಎಂದು ರಾಜ್ಯ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸಚಿವ ಸುನೀಲ್ ಕುಮಾರ್ ಹೇಳಿದರು.
ಅವರುಯಕ್ಷಗಾನ ಸಾಹಿತಿ, ನಾಟಕಗಾರ ಗಣೇಶ್ ಕೊಲಕಾಡಿಯವರಿಗೆ ಯಕ್ಷಗಾನ ಆಕಾಡಮಿಯಿಂದ ನೀಡಲಾಗುವ ಪಾರ್ತಿಸುಬ್ಬ ಪ್ರಶಸ್ತಿಯನ್ನು ಕೊಲಕಾಡಿ ಗಣೇಶ್ ರವರ ಮನೆಯಲ್ಲಿ ಪ್ರಧಾನ ಮಾಡಿ ಮಾತನಾಡಿದರು.
ಈ ಸಂದರ್ಭ ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಯಕ್ಷಗಾನ ಆಕಾಡಮಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ, ಸದಸ್ಯರಾದ, ಮಾಧವ ಭಂಡಾರಿ, ಕದ್ರಿ ನವನೀತ ಶೆಟ್ಟಿ, ಶ್ರೀನಿವಾಸ ಸಾಸ್ತಾನ, ಕೆ.ಎಂ. ಶೇಖರ, ಯೋಗೀಶ ರಾವ್ ಚಿಗುರುಪಾದೆ ಎಂ. ದಾಮೋದರ ಶೆಟ್ಟ, ಎಸ್.ಹೆಚ್.ಶಿವರುದ್ರಪ್ಪ, ಅತಿಕಾರಿಬೆಟ್ಟು ಗ್ರಾ ಪಂ ಅಧ್ಯಕ್ಷ ಮನೋಹರ್ ಕೋಟ್ಯಾನ್, ವಿಜಯ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಅಳ್ವ, ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
11/09/2022 07:36 am