ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಆ.13, 14 ರಂದು ಬೈಕ್ ರ‍್ಯಾಲಿ: ಮಾಜಿ ಸಚಿವ ಸೊರಕೆ

ಉಡುಪಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕಾಪು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಯಲ್ಲೂ ರಾಷ್ಟಧ್ವಜ ಹಾರಿಸಬೇಕೆಂಬ ಉದ್ದೇಶದಿಂದ ಆ.13 ಮತ್ತು 14 ರಂದು ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಆ.13, ಮಧ್ಯಾಹ್ನ 3 ಗಂಟೆಗೆ ಕಾಪು ಹೆಜಮಾಡಿಯಿಂದ ಉದ್ಯಾವರದವರೆಗೆ ರಾಷ್ಟಧ್ವಜದ ಜೊತೆಗೆ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ರ‍್ಯಾಲಿಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮುಖಂಡ ಮಿಥುನ್ ರೈ, ಐವನ್ ಡಿಸೋಜಾ, ಇನಾಯತ್ ಅಲಿ ಭಾಗವಹಿಸಲಿದ್ದು, ಉದ್ಯಾವರದಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಆ.14, ಮಧ್ಯಾಹ್ನ 1.30 ಕ್ಕೆ ಕುಕ್ಕೆಹಳ್ಳಿಯಲ್ಲಿ ಬೈಕ್ ರ‍್ಯಾಲಿ ಆರಂಭಗೊಳ್ಳಲಿದ್ದು, ಪೆರ್ಡೂರು, ಬೈರಂಪಳ್ಳಿ ಬೊಮ್ಮರಬೆಟ್ಟು ಕೋಡಿಬೆಟ್ಟು ಆತ್ರಾಡಿ, ಪರ್ಕಳ, ಬಡಗಬೆಟ್ಟು. ರಾಜೀವನಗರದ ಮೂಲಕ ಅಲೆವೂರಿನಲ್ಲಿ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

Edited By : Shivu K
Kshetra Samachara

Kshetra Samachara

12/08/2022 08:33 pm

Cinque Terre

9.21 K

Cinque Terre

0

ಸಂಬಂಧಿತ ಸುದ್ದಿ