ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅಂಬೇಡ್ಕರ್ ಯುವ ಸೇನೆ (ರಿ)ಕೆರೆಕಾಡು ಶಾಖೆಯ ಉದ್ಘಾಟನೆ

ಮುಲ್ಕಿ: ಅಂಬೇಡ್ಕರ್ ಯುವ ಸೇನೆ (ರಿ) ನೂತನ ಕೆರೆಕಾಡು ಗ್ರಾಮದ ಶಾಖೆ ಉದ್ಘಾಟನಾ ಸಮಾರಂಭ ಮುಲ್ಕಿಯ ಗೇರುಕಟ್ಟೆ ಅಮೃತಾಮಯಿ ನಗರ ದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ದಲಿತ ಚಿಂತಕರಾದ ಜಯನ್ ಮಲ್ಪೆ ವಹಿಸಿದ್ದರು.

ಸಮಾರಂಭದ ಉದ್ಘಾಟನೆಯನ್ನು ಹಿರಿಯ ಮಹಿಳೆ ಶ್ರೀಮತಿ ನೊಕ್ಕು, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಉದ್ಘಾಟಿಸಿದರು. ಈ ಸಂದರ್ಭ ಶಾಲೆಟ್ ಪಿಂಟೋ ಮಾತನಾಡಿ ಉತ್ತರಭಾರತದಲ್ಲಿ ದಲಿತರ ಮೇಲೆ ದೌರ್ಜನ್ಯ ನಿರಂತರವಾಗಿದ್ದು ಪ್ರಶ್ನಿಸುವವರನ್ನು ದಮನಿಸುವ ಕೆಲಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೂತನ ಕೆರೆಕಾಡು ಅಂಬೇಡ್ಕರ್ ಯುವಸೇನೆ ಗೆ ಶುಭಹಾರೈಸಿದ ಅವರು ಸಂಘಟನೆಯಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೂ ಅವಕಾಶ ನೀಡದೆ ದಲಿತರ ಮೇಲೆ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟ ನಡೆಸಬೇಕು ಎಂದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಕಾಪು ತಾಲೂಕು ಅಂಬೇಡ್ಕರ್ ಯುವ ಸೇನೆ ಯ ಅಧ್ಯಕ್ಷರಾದ ಲೋಕೇಶ್ ಪಡುಬಿದ್ರೆ ಮಾತನಾಡಿ ಸಂಘಟನೆಯಲ್ಲಿ ಯಾವುದೇ ರಾಜಕೀಯ ಪಕ್ಷ ಸೇರ್ಪಡೆಗೆ ಅವಕಾಶವಿಲ್ಲ, ಕೆಲ ರಾಜಕೀಯ ಪಕ್ಷಗಳು ಸಂವಿಧಾನವನ್ನು ಬದಲಿಸುವ ಪಿತೂರಿ ನಡೆಸುತ್ತಿದೆ, ದಲಿತರ ಹೋರಾಟವನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ, ಯುವಕರಿಗೆ ಕೇಸರಿ ಶಾಲು ಹಾಕಿಸಿ ಹಾದಿ ತಪ್ಪಿಸಲಾಗುತ್ತಿದೆ ಇದರ ವಿರುದ್ಧ ಅಂಬೇಡ್ಕರ್ ಯುವ ಸೇನೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಉಡುಪಿ ಜಿಲ್ಲೆಯ ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷರಾದ ಹರೀಶ್ ಸಾಲ್ಯಾನ್, ಕಾಪು ತಾಲೂಕು ಗೌರವಾಧ್ಯಕ್ಷರಾದ ಕೃಷ್ಣ ಬಂಗೇರ, ದಲಿತ ಮುಖಂಡರಾದ ಸುಂದರ ಕಪ್ಪೆಟ್ಟು, ಕಾಪು ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ರಾಜೀವಿ ವಸಂತ, ಉದ್ಯಮಿ ಗೌರೀಶ ಲೈಟ್ ಹೌಸ್, ಉದ್ಯಮಿ ಜೀವನ ಕೆ ಶೆಟ್ಟಿ ಕಾರ್ನಾಡು, ಅಂಬೇಡ್ಕರ್ ಯುವ ಸೇನೆ ಕೆರೆಕಾಡು ಘಟಕದ ಅಧ್ಯಕ್ಷರಾದ ಉಮೇಶ್ ಕೆರೆಕಾಡು, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಿಕಾ ಬೆಳ್ಳಾಯರು, ಅಂಬೇಡ್ಕರ್ ಯುವ ಸೇನೆ ಉಡುಪಿಯ ರಮೇಶ್ ಪಾಲ್, ವೇದಿಕೆಯಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಜನದನಿ ಸಿರಿ ಪ್ರಶಸ್ತಿ ವಿಜೇತ ಜಯನ್ ಮಲ್ಪೆ, ಪ್ರತಿಭಾನ್ವಿತೆ ನಿಖಿತಾ ಕುಮಾರಿ ಪಾಂಗಾಳ ರವರನ್ನು ಗೌರವಿಸಲಾಯಿತು.ಸುಶ್ಮಿತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Edited By : Nagesh Gaonkar
Kshetra Samachara

Kshetra Samachara

29/11/2020 02:48 pm

Cinque Terre

11.35 K

Cinque Terre

2

ಸಂಬಂಧಿತ ಸುದ್ದಿ