ಮಂಗಳೂರು: ಪ್ರತಿ ಹತ್ಯೆಯನ್ನು ಪಿಎಫ್ಐ ಸಂಘಟನೆಯ ಮೇಲೆ ಹೊರಿಸುವ ಷಡ್ಯಂತರ ನಡೆಯುತ್ತಿದೆ. ಕೊಲೆ ಆರೋಪಿಗಳು ಪಿಎಫ್ಐ ಸದಸ್ಯರೇ ಎಂಬುದನ್ನು ಪರಿಶೀಲಿಸದೆ ವ್ಯವಸ್ಥಿತವಾಗಿ ಪಿಎಫ್ಐ ಸಂಘಟನೆಯ ತಲೆಗೆ ಕಟ್ಟುವ ಪ್ರಯತ್ನವಾಗುತ್ತಿದೆ ಎಂದು ಪಿಎಫ್ಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಎ.ಕೆ. ದೂರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇದೀಗ ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಆರೋಪಿ ಎನ್ನಲಾಗಿರುವ ಶಫೀಕ್‌ನನ್ನು ಪಿಎಫ್ಐ ಕಾರ್ಯಕರ್ತ ಎಂದು ಬಿಂಬಿದಲಾಗುತ್ತಿದೆ. ಆದರೆ ದ.ಕ.ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರಿದ್ದಾರೆ. ಆತ ಪಿಎಫ್ಐ ಕಾರ್ಯಕರ್ತನೇ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಆಗ್ರಹಿಸಿದರು.
ಸರಕಾರದ ಸಂತೃಪ್ತಿಗಾಗಿ ಪೊಲೀಸ್ ಇಲಾಖೆಯು ಅಮಾಯಕರನ್ನು ಬಲಿಪಶು ಮಾಡುತ್ತಿದೆ. ಮಸೂದ್ ಹತ್ಯೆ ಹಾಗೂ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಒಂದೇ ರೀತಿಯಲ್ಲಿ ನೋಡಬೇಕಿತ್ತು. ಆದರೆ ಮಾಧ್ಯಮಗಳು, ಸರ್ಕಾರ, ಪೊಲೀಸ್ ಇಲಾಖೆ ಪ್ರವೀಣ್ ಹತ್ಯೆಗೆ ವೈಭವೀಕರಣ ಕೊಡುತ್ತಿದೆ. ಆರೋಪಿಯೊಬ್ಬ ಅಪರಾಧಿ ಎಂದು ಸಾಬೀತು ಆಗುವ ಮೊದಲೇ ಆತನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಇಡೀ ಒಂದು ಸಮುದಾಯವನ್ನು, ಸಂಘಟನೆಯನ್ನು ಕಟಕಟೆಯಲ್ಲಿ ನಿಲ್ಲಿಸುವ ಈ ಷಡ್ಯಂತರವನ್ನು ಪಿಎಫ್ಐ ಖಂಡಿಸುತ್ತದೆ ಎಂದು ಹೇಳಿದ್ದಾರೆ.
Kshetra Samachara
28/07/2022 10:36 pm