ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸತ್ಯ ಮರೆ ಮಾಚೋದೇನೂ ಇಲ್ಲ,ಮಾಹಿತಿ ಬರೋವರೆಗೆ ಕಾಯೋಣ !

ಮಂಗಳೂರು: ಸಚಿವ ಈಶ್ವರಪ್ಪ ವಿರುದ್ದ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಸಚಿವ ಡಾ.ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದರು.

ಸದ್ಯ ಕೇಳಿ ಬರ್ತಿರೋ ಸುದ್ದಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ‌ ಬಗ್ಗೆ ಸಂಬಂಧಪಟ್ಟ ಇಲಾಖೆ‌ ಮಾಹಿತಿ ಪಡೆದುಕೊಂಡು ಸ್ಪಷ್ಟತೆ ಕೊಡ್ತಾರೆ. ಡೆತ್ ನೋಟ್ ಇದ್ಯೋ ಇಲ್ವೋ ನನಗೆ ಗೊತ್ತಿಲ್ಲ. ಯಾವ ಕಾರಣಕ್ಕೆ ಆತ್ಮಹತ್ಯೆ ಅಂತಾನೂ ಗೊತ್ತಿಲ್ಲ. ಅಪಾದನೆ ಅವರು ಮಾಡಿದ್ರು, ಹಾಗಂತ ಅದಕ್ಕೆ ಸಂಬಂಧ ಕಲ್ಪಿಸೋದಕ್ಕೆ ಆಗಲ್ಲ. ಸತ್ಯ ಏನಿರುತ್ತೋ ಅದು ಸತ್ಯ. ಹೀಗಾಗಿ ಸತ್ಯ ಮರೆ ಮಾಚೋದು, ಮುಚ್ಚಿಡೋದು ಏನಿಲ್ಲ. ಮಾಹಿತಿ ಬರಲಿ ಕಾಯುವ, ಏನಿದೆ ಅಂತ ನೋಡುವ. ಪ್ರತಿಪಕ್ಷ ಸಾಮಾನ್ಯವಾಗಿ ಅವರು ವಿರೋಧ ಮಾಡೇ ಮಾಡ್ತಾರೆ.

ಆದರೆ ಸತ್ಯ ಏನು ಅಂತ ತಿಳಿದು ಅದರ ಬಗ್ಗೆ ತನಿಖೆ ಆಗುತ್ತವೆ. ನಮ್ಮ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದ ವಿರುದ್ದವಾಗಿದೆ. ಭ್ರಷ್ಟಾಚಾರ ರಹಿತ ಸಮಾಜ ಕಟ್ಟಲು ಬದ್ದವಾಗಿರೋ ಪಕ್ಷ ನಮ್ಮದು. ಎಲ್ಲಾ ವಿಚಾರದಲ್ಲಿ ಪಾರದರ್ಶಕತೆ ಹಿನ್ನೆಲೆ ಆಧಾರ್ ಸೀಡ್, ಪ್ಯಾನ್ ಸೀಡ್ ಮಾಡ್ತಿದ್ದಾರೆ. ಹಣದ ವಹಿವಾಟಿನಲ್ಲಿ ಪಾರದರ್ಶಕತೆ ಇರಬೇಕು ಅನ್ನೋ ಕೆಲಸ ಆಗ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕುರಿತ ಎಲ್ಲಾ ಕೆಲಸಗಳು ನಡೆಯಲಿದೆ. ಗುಣಮಟ್ಟದ ಸಮಾಜ ಇರಬೇಕು, ಭ್ರಷ್ಟಾಚಾರ ಇದ್ರೆ ಉತ್ತಮ ಸಮಾಜ ಕಟ್ಟಲು ಸಾಧ್ಯವಿಲ್ಲ ಎಂದರು‌

Edited By : Shivu K
PublicNext

PublicNext

13/04/2022 10:15 am

Cinque Terre

42.18 K

Cinque Terre

2

ಸಂಬಂಧಿತ ಸುದ್ದಿ