ಮಂಗಳೂರು: ನಗರದ ಬಂಗ್ರಕೂಳೂರಿನಲ್ಲಿ ತಲವಾರು ಝಳಪಿಸಿ ಗೋ ಅಪಹರಣ ಮಾಡಿದ ಕೃತ್ಯವನ್ನು ಖಂಡಿಸಿ ವಿಎಚ್ ಪಿ, ಭಜರಂಗದಳದಿಂದ ಕಾವೂರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಮುಂದಾಳುಗಳು, ಅಲ್ಲಲ್ಲಿ ನಡೆಯುತ್ತಿರುವ ಗೋ ಕಳ್ಳತನವನ್ನು ಮಟ್ಟ ಹಾಕಿ, ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದರು.
ಹೆದ್ದಾರಿ ಪಕ್ಕ ಸಿಸಿ ಕ್ಯಾಮೆರಾಗಳಿವೆ. ಪೊಲೀಸರ ನಾಕಾಬಂಧಿ ಇರುತ್ತೆ. ಆದರೂ ಗೋ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ. ತಲವಾರು ತೋರಿಸಿ ಜೀವ ಬೆದರಿಕೆ ಹಾಕಿ ಕಣ್ಣ ಮುಂದೆಯೇ ಗೋ ಅಪಹರಣ ಮಾಡುತ್ತಿದ್ದಾರೆ!
ಗೋ ರಕ್ಷಣೆಗೆ ಪೊಲೀಸರು ಇನ್ನೂ ಬಿಗಿ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
Kshetra Samachara
04/12/2021 08:03 pm