ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಫಾಝಿಲ್ ಹತ್ಯೆಯ ಹಿಂದಿನ ಸೂತ್ರಧಾರಿಯ ಬಂಧನ ಇನ್ನೂ ಆಗಿಲ್ಲ: ಫಾರೂಕ್

ಮಂಗಳೂರು: ಸುರತ್ಕಲ್ ಫಾಝಿಲ್ ಹತ್ಯೆಯ ಹಿಂದಿನ ಸೂತ್ರಧಾರನನ್ನು ಬಂಧನವಾಗದಿದ್ದಲ್ಲಿ ಇನ್ನೂ ಕೊಲೆಗಳಾಗುತ್ತವೆ. ಶೀಘ್ರವೇ ಅವರ ಬಂಧನವಾಗಲಿ. ಪುತ್ರನನ್ನು ಕಳೆದುಕೊಂಡ ನನ್ನ ನೋವು ಇನ್ನಾರಿಗೂ ಬರೋದು ಬೇಡ ಎಂದು ಹತ್ಯೆಯಾದ ಫಾಝಿಲ್ ತಂದೆ ಫಾರೂಕ್ ಗದ್ಗದಿತರಾದರು‌.

ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕುಖ್ಯಾತ ಕೊಲೆಗಡುಕರನ್ನು ಹೀಗೆ ಬಿಟ್ಟಲ್ಲಿ ಅವರ ಮಕ್ಕಳೂ ಇದೇ ರೀತಿ ಆಗುತ್ತಾರೆ. ಅದಕ್ಕಾಗಿ ಇವರ ರಾಜಕೀಯಕ್ಕಾಗಿ ಯಾವ ಮಕ್ಕಳೂ ಸಾಯಬಾರದು. ಪೊಲೀಸ್ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಆದರೆ ಅವರ ಕೈಕಟ್ಟಿ ಹಾಕುವ ಪ್ರಯತ್ನ ಮಾಡಲಾಗಿದೆ. ಆದ್ದರಿಂದ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪಿಗಳನ್ನಷ್ಟೇ ಬಂಧಿಸಲಾಗಿದೆ. ಹೊರತು ಕೊಲೆಯ ಹಿಂದಿರುವ ಸೂತ್ರಧಾರನ ಬಂಧನವಾಗಿಲ್ಲ ಎಂದು ಹೇಳಿದರು.

ಜೈಲಿನಲ್ಲಿ ತಹಶೀಲ್ದಾರ್ ಚಹರೆ ಗುರುತು ಪತ್ತೆ ಹಚ್ಚುವ ಕಾರ್ಯ ಮಾಡಿದ್ದಾರೆ‌. ಅದರಲ್ಲೂ ಮುಖ್ಯ ಸಾಕ್ಷಿಯನ್ನು ಬಿಡಲಾಗಿದೆ. ಆರೋಪಿಗಳು ಕೊಲೆ ಕೃತ್ಯ ನಡೆಸಿ ಇನ್ನಾಕ್ಕೆ ಪರಾರಿಯಾಗಿದ್ದಾರೆ. ಅಲ್ಲಿಂದ 27 ವರ್ಷದ ಹಳೆಯ ವಾಹನದಲ್ಲಿ ಬಿ.ಸಿ.ರೋಡಿಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸಾಧ್ಯವೇ?. ಆ ವಾಹನದ ಮಾಲಕ ಯಾರೆಂದು ಇನ್ನೂ ಹೇಳಿಲ್ಲ. ಇವರು ನೈಜ ಆರೋಪಿಗಳನ್ನು ಪತ್ತೆ ಹಚ್ಚುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇದರ ಹಿಂದೆ ಕಾಣದ ಕೈಗಳು ಬಹಳಷ್ಟು ಇದೆ‌. ಪೊಲೀಸ್ ಇಲಾಖೆಗೆ ನಾವು ಆರೋಪಿಗಳು ಯಾರು ಎಂದು ಹೇಳಿದರೂ ಅರೆಸ್ಟ್ ಮಾಡುವುದಿಲ್ಲ ಎಂದು ಫಾರೂಕ್ ಹೇಳಿದರು.

Edited By : Manjunath H D
PublicNext

PublicNext

30/08/2022 10:46 pm

Cinque Terre

64.43 K

Cinque Terre

3

ಸಂಬಂಧಿತ ಸುದ್ದಿ