ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಚುರುಕುಗೊಂಡ ಸಂತೋಷ್ ಆತ್ಮಹತ್ಯೆ ತನಿಖೆ, ಲಾಡ್ಜಿಗೆ ಬರುತ್ತೇನೆಂದು ಹೇಳಿದ್ದ ರಾಜೇಶ್ ಯಾರೆಂಬ ಶಂಕೆ?

ಉಡುಪಿ: ರಾಜ್ಯದಲ್ಲೇ ಭಾರಿ ಸುದ್ದಿಯಾದ, ಸಂತೋಷ್ ಪಾಟೀಲ್ ಕೇಸ್‌ನ್ನು ಉಡುಪಿ ಕೋರ್ಟ್‌ನಿಂದ ಬೆಂಗಳೂರಿನ ಜನತಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಇನ್ನು ಸಂತೋಷ್ ಪಾಟೀಲ್ ನ ಇಬ್ಬರು ಗೆಳೆಯರು ಪೋಲೀಸರ ವಶದಲ್ಲೇ ಇದ್ದು ವಿಚಾರಣೆ ಮುಂದುವರಿದಿದೆ.

ಈ ನಡುವೆ ಲಾಡ್ಜಿಗೆ ಬರುತ್ತೇನೆಂದು ಮೃತ ಸಂತೋಷ್ ಪಾಟೀಲ್ ಜೊತೆ ಹೇಳಿದ್ದ ರಾಜೇಶ್ ಯಾರು? ಎಂಬ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪಗೆ ಉರುಳಾಗಿ ಪರಿಣಮಿಸಿರುವ ಸಂತೋಷ್ ಪಾಟೀಲ್ ನಿಗೂಢ ಸಾವು ಪ್ರಕರಣದ ತನಿಖೆ ಚುರುಕುಗೊಂಡಿದೆ.ಉಡುಪಿ ಎಸ್ಪಿ ವಿಷ್ಣುವರ್ಧನ ಅವರು ತನಿಖೆಗಾಗಿ ಎರಡು ವಿಶೇಷ ತಂಡ ರಚನೆ ಮಾಡಿದ್ದಾರೆ. ಈ ತಂಡವು ಬೆಂಗಳೂರು ಮತ್ತು ಬೆಳಗಾವಿಗೆ ತೆರಳಿ ತನಿಖೆ ನಡೆಸಲಿದೆ.ಇನ್ನು ಈ ವಿಶೇಷ ಪ್ರಕರಣ ಉಡುಪಿ ನ್ಯಾಯಾಲಯದಿಂದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಶಿಫ್ಟ್ ಆಗಿದೆ.ಈ ನಡುವೆ ಲಾಡ್ಜ್ ಗೆ ಬಂದು ಸಂತೋಷ್ ನನ್ನು ಸೇರಿಕೊಳ್ಳುತ್ತೇನೆ ಎಂದು ಹೇಳಿದ ರಾಜೇಶ್ ಯಾರು? ಆತ ರೂಮಿಗೆ ಬಂದು ಹೋಗಿದ್ದನೆ? ಎಂಬ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹೋಟೆಲ್ ಮಾಲಿಕರು, ಸಂತೋಷ್ ಪಾಟೀಲ್ ಬಂದಾಗಿನ ಕೆಲವೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಸಂತೋಷ್ ಸೋಮವಾರ ಸಂಜೆ ಬಂದು 207 ಹಾಗೂ 208 ಹೀಗೆ ಎರಡು ರೂಮ್ ಮಾಡಿದ್ದರಂತೆ. ಮಂಗಳವಾರ ಬೆಳಗ್ಗೆ ಸಂತೋಷ್ ಗೆಳೆಯರು ಬಂದು ಸಂತೋಷ್ ಇದ್ದ ರೂಮ್ ಬಾಗಿಲು ತೆಗೀತಾ ಇಲ್ಲ ಅಂದಿದ್ದರು.ನಂತರ ಹೋಟೆಲ್ ಸಿಬ್ಬಂದಿ ತಮ್ಮಲ್ಲಿರುವ ಡೂಬ್ಲಿಕೇಟ್ ಕೀ ಬಳಸಿ ರೂಮ್ ಬಾಗಿಲು ತೆಗೆದು ನೋಡಿದಾಗ ಸಂತೋಷ್ ಸಾವಿಗೀಡಾದ ವಿಷಯ ಬೆಳೆಕಿಗೆ ಬಂದಿದೆ. ಸದ್ಯ ಆತ್ಮಹತ್ಯೆ ಮಾಡಿಕೊಂಡ ರೂಮ್ ನ್ನು ಯಾರಿಗೂ ನೀಡಲಾಗ್ತಿಲ್ಲ, ಅಲ್ಲದೇ ಹೋಟೆಲ್ ಗೆ ಬರುವ ಕಸ್ಟಮರ್‌ಗೆ ಯಾವುದೇ ಭಯ ಇರಬಾರದು ಅಂತ ಹೋಟೆಲ್‌ನಲ್ಲಿ ದೇವರ ಪೂಜೆ ಮಾಡಿ ಗಣ ಹೋಮ ನಡೆಸಲು ತೀರ್ಮಾನಿಸಲಾಗಿದೆ!

ಒಟ್ಟಿನಲ್ಲಿ ಈಶ್ವರಪ್ಪಗೆ ಉರುಳಾಗಿರುವ ಸಂತೋಷ್ ಪಾಟೀಲ್ ಕೇಸ್ ಎಲ್ಲಿಗೆ ಹೋಗಿ ತಲುಪುತ್ತೋ ಕಾದು ನೋಡಬೇಕಿದೆ.

Edited By : Manjunath H D
PublicNext

PublicNext

15/04/2022 05:38 pm

Cinque Terre

49.32 K

Cinque Terre

10

ಸಂಬಂಧಿತ ಸುದ್ದಿ