ಉಡುಪಿ: ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದು ಉಡುಪಿ ಶಾಸಕ ರಘಪತಿ ಭಟ್ ಗೆ ವಿದೇಶಗಳಿಂದ ಬೆದರಿಕೆ ಕರೆಗಳು ಬಂದಿವೆ. ಸ್ವತಃ ಶಾಸಕರೇ ಈ ವಿಷಯವನ್ಬು ಬಹಿರಂಗಪಡಿಸಿದ್ದಾರೆ. ಇಂಟರ್ನೆಟ್ ಮೂಲಕ ನನಗೆ ವಿದೇಶದಲ್ಲಿ ಕೂತು ಕಿಡಿಗೇಡಿಗಳು ಬೆದರಿಸುತ್ತಿದ್ದಾರೆ.
ಎಸ್ಪಿಯವರು ನೀವ್ ಗನ್ ಮ್ಯಾನ್ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ. ಆದ್ರೆ ನನಗೆ ಯಾವುದೇ ಗನ್ ಮ್ಯಾನ್ ಬೇಡ, ನನಗೆ ಭದ್ರತೆಗಾಗಿ ನನ್ನ ಜನಗಳೇ ಇದ್ದಾರೆ. ಇಂತಹ ಬೆದರಿಕೆ ಕರೆಗಳಿಗೆ ಜಗ್ಗುವ ವ್ಯಕ್ತಿ ನಾನಲ್ಲ. ಇಂಟರ್ನೆಟ್ ಕಾಲ್ ಮೂಲಕ ಹಲವರು ಬೆದರಿಸುತ್ತಿದ್ದಾರೆ.
ಹೈದರಾಬಾದ್ ನಿಂದ ಫೋನ್ ವಾಟ್ಸಪ್ಪ್ ಫೇಸ್ಬುಕ್ ಮೂಲಕ ಥ್ರೆಟ್ ಹಾಕುತ್ತಿದ್ದಾರೆ.
ನಾನು ಯೂನಿಫಾರ್ಮ್ ವಿಚಾರ ಬಿಟ್ಟು ಬೇರೆ ಯಾವ ವಿಚಾರದ ಬಗ್ಗೆಯೂ ಚರ್ಚೆ ಮಾಡಿಲ್ಲ, ಮಾತನಾಡಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
PublicNext
12/02/2022 10:58 am