ಪ್ರಕಾಶಚಂದ್ರ ಶೆಟ್ಟಿ ಯುವ ರಾಜಕೀಯ ಹೋರಾಟಗಾರ. ಸಂಘ ಪರಿವಾರದ ತತ್ವ- ಸಿದ್ಧಾಂತವನ್ನು ಮೈಗೂಡಿಸಿಕೊಂಡು ಬಂದಿರುವ ಪ್ರಕಾಶಚಂದ್ರ ಶೆಟ್ಟಿ ಕಾವ್ರಾಡಿ ಗ್ರಾಮ ಪಂಚಾಯಿತಿ ಅಖಾಡಕ್ಕೆ ಧುಮುಕುವಾಗ ಕಾವ್ರಾಡಿ ಕಾಂಗ್ರೆಸ್ ಮಯವಾಗಿತ್ತು. ಆದರೆ, ಯುವಕ ತಂಡ ಕಟ್ಟಿ ಅಭಿವೃದ್ಧಿ ಮೂಲಮಂತ್ರವನ್ನು ಇಟ್ಟುಕೊಂಡು ತನ್ನ ವಾರ್ಡ್ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಿ ಸೈ ಎನಿಸಿಕೊಂಡಿದ್ದಾರೆ.
ಕಾವ್ರಾಡಿ ಒಂದನೇ ವಾರ್ಡ್ ನಲ್ಲಿ ಅನೇಕ ಮನೆಗಳಿಗೆ ತನ್ನ ಖರ್ಚಿನಲ್ಲೇ ರೋಡ್ ಮಾಡಿಸಿ ನಂತರ ಪಂಚಾಯಿತಿಯ ಅನುದಾನ ಪಡೆದುಕೊಂಡು ದಾರಿದೀಪದ ವ್ಯವಸ್ಥೆ, ಮನೆ- ಮನೆಗೆ ನೀರಿನ ವ್ಯವಸ್ಥೆ ಬಗ್ಗೆ ಕನಸು ಕಂಡಿದ್ದ ದೂರದೃಷ್ಟಿಯ ನಾಯಕ.
ವಾಲ್ತೂರು ದೂಪದಕಟ್ಟೆಯ ರಸ್ತೆ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನವನ್ನು ತಂದ ಹೆಮ್ಮೆ ಇವರದ್ದು. ಮಾತು ಖಡಕ್, ಅದರ ಜೊತೆಗೆ ಅಭಿವೃದ್ಧಿಯಲ್ಲಿ ಖಡಕ್ ನಿರ್ಧಾರ. ಶಾಸಕರ ಮನೆಯಲ್ಲಿ ಕುಳಿತು ತನ್ನ ವಾರ್ಡ್ ಜನರ ಮೂಲಭೂತ ಸೌಕರ್ಯಗಳನ್ನು ಮಾಡಿಸಿಕೊಂಡು ಬರುವ ಭರವಸೆಯ ಜನನಾಯಕ ಇವರು.
ಈ ಬಾರಿ ಕಾವ್ರಾಡಿ ಗ್ರಾಮ ಪಂಚಾಯಿತಿಯ ಅಧಿಕಾರದ ಚುಕ್ಕಾಣಿ ಬಿಜೆಪಿಯ ಕೈ ಸೇರುತ್ತದೆ ಎನ್ನುವುದು ಪ್ರಕಾಶಚಂದ್ರ ಶೆಟ್ಟಿ ಅವರ ವಿಶ್ವಾಸದ ಮಾತು.
Kshetra Samachara
20/12/2020 05:38 pm