ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿ ಪ್ರತಿ ಸುಟ್ಟು ಕಟ್ಟಡ ಕಾರ್ಮಿಕರಿಂದ ಆಕ್ರೋಶ

ಮಣಿಪಾಲ: ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯು ಕಟ್ಟಡ ಕಾರ್ಮಿಕರು ಹಾಗೂ ಇತರ ಕಾರ್ಮಿಕರ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಬೆಳಿಗ್ಗೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಮುಖ್ಯವಾಗಿ ಕಾರ್ಮಿಕರ ಆರೋಗ್ಯಕ್ಕಿರುವ ಇಎಸ್ ಐ ಸೌಲಭ್ಯವು ಹಣ ಪಾವತಿ ಬಾಕಿ ಇರಿಸಿದ್ದರಿಂದ ಸ್ಥಗಿತಗೊಂಡಿದೆ. ಕೇಂದ್ರ ಸರಕಾರವು ಇಎಸ್ ಐ ಬಾಕಿ ಇರಿಸಿದ ಪರಿಣಾಮವಾಗಿ ಖಾಸಗಿ ಆಸ್ಪತ್ರೆಗಳು ಕಾರ್ಮಿಕರಿಗೆ ಸೌಲಭ್ಯ ನೀಡುತ್ತಿಲ್ಲ.

ಇಎಸ್ ಐ ಯಾರ ದುಡ್ಡೂ ಅಲ್ಲ. ಅದು ಕಾರ್ಮಿಕರ ಹಕ್ಕು. ಅದನ್ನೇ ಕೊಡಲು ಸರಕಾರ ಹಿಂದೇಟು ಹಾಕುತ್ತಿದೆ ಎಂದು ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಜೊತೆಗೆ ಮರಳಿನ ದರ ಗಗನಕ್ಕೇರಿದೆ. ಕೇಂದ್ರ, ರಾಜ್ಯ ಸರಕಾರವು ಕಾರ್ಮಿಕರು ಮತ್ತು ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯ ಕೊನೆಯಲ್ಲಿ ಸರಕಾರ ಅಂಗೀಕರಿಸಿದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಪ್ರತಿಯನ್ನು ಸುಡುವ ಮೂಲಕ ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.

Edited By : Manjunath H D
Kshetra Samachara

Kshetra Samachara

15/12/2020 01:37 pm

Cinque Terre

19.4 K

Cinque Terre

2

ಸಂಬಂಧಿತ ಸುದ್ದಿ