ಉಡುಪಿ: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು ಬೇಡಿಕೆ ಈಡೇರಿಸಲಾಗದ ಸರ್ಕಾರ ಅಸಮರ್ಥ ಸರ್ಕಾರ ಎಂದು ಉಡುಪಿಯಲ್ಲಿ ಕಾರ್ಮಿಕ ನಾಯಕ ಬಾಲಕೃಷ್ಣ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂಬಾಗಿಲಿನಿಂದ ಬಂದ ಸರಕಾರ ಶೀಘ್ರ ತೊಲಗಬೇಕು ಎಂದಿರುವ ಅವರುಜನಸಾಮಾನ್ಯರಿಗೆ ಉಪಯೋಗ ಇಲ್ಲದ ಸರ್ಕಾರ ಇದ್ದರೆಷ್ಟು, ಬಿಟ್ಟರೆಷ್ಟು?
ಇದು ರೈತರ ವಿರೋಧಿ ಸರಕಾರ.ಜೆಡಿ ಎಸ್ ಬೆಂಬಲ ಪಡೆದು ಕಾನೂನು ತಿದ್ದುಪಡಿ ಮಾಡಿದೆ. ಬಿಜೆಪಿ ಸರ್ಕಾರ ಅಧಿಕಾರದಿಂದ ಇಳಿಯುವವರೆಗೆ ರಾಜ್ಯದ ಜನತೆಗೆ ನೆಮ್ಮದಿ ಇಲ್ಲ.
ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದಿದ್ದರೆ ಅಧಿಕಾರದಿಂದ ಇಳಿಯಿರಿ ಎಂದು ಸಿಪಿಐಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
14/12/2020 04:19 pm