ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸುಳ್ಳು ಹೇಳುವುದರಲ್ಲಿ ಯಾರಾದರೂ ನಿಪುಣರು ಇದ್ದರೆ ಅದು ಕಾಂಗ್ರೆಸ್ಸಿನವರು: ಸಂಸದೆ ಶೋಭಾ

ಉಡುಪಿ: ಸುಳ್ಳು ಹೇಳುವುದರಲ್ಲಿ ಯಡಿಯೂರಪ್ಪ ಮಿನಿ ಮೋದಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ,ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹೇಗೆ ಆಡಳಿತ ಮಾಡಿದ್ದಾರೆ ನೋಡಿದ್ದೇವೆ.ಕೋಮುಗಳನ್ನು ಒಡೆದು ಆಳುವ ನೀತಿ ಮಾಡಿದ್ರಿ.

ಜಾತಿ ಜಾತಿಯನ್ನು ಒಡೆಯುವ ನೀತಿ ಮಾಡಿದ್ರಿ.ಅಭಿವೃದ್ಧಿಗಿಂತ ಹೆಚ್ಚಾಗಿ ಜಾತಿ ಒಡೆಯುವುದರಲ್ಲಿ ಮಗ್ನರಾಗಿದ್ರಿ.ನರೇಂದ್ರ ಮೋದಿ ಕೊಟ್ಟ ಅಕ್ಕಿ ಗೋಧಿ ಬಳಕೆ ಮಾಡಿಕೊಂಡಿರಿ.ನಾನೇ ಅನ್ನಭಾಗ್ಯ ಯೋಜನೆ ಕೊಟ್ಟೆ ಎಂದು ಸುಳ್ಳು ಹೇಳಿದ್ರಿ.ಸುಳ್ಳು ಹೇಳುವುದರಲ್ಲಿ ಯಾರಾದರೂ ನಿಪುಣರು ಇದ್ದರೆ ಅದು ಕಾಂಗ್ರೆಸ್ಸಿನವರು ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು,ಸುಳ್ಳು ಹೇಳುವುದು ಕಾಂಗ್ರೆಸ್ಸಿನ ಚಾಳಿ.ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಅಥವಾ ಬೇರೆಲ್ಲೂ ಭವಿಷ್ಯವಿಲ್ಲ.ಸಿದ್ದರಾಮಯ್ಯ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಶೋಭಾ,ನಿಮಗೆ ಗೊತ್ತಿರುವ ಮಾಹಿತಿ ಮೊದಲು ಬಹಿರಂಗಪಡಿಸಿ.

ಬುಟ್ಟಿಯಲ್ಲಿ ಹಾವಿದೆ ಹಾವಿದೆ ಎಂದು ಹೆದರಿಸುವುದನ್ನು ಬಿಡಿ. ಸಾಧ್ಯವಿದ್ದರೆ ಆ ಹಾವನ್ನು ಹೊರಗೆ ಬಿಡಿ.ಈ ಪ್ರಕರಣದಲ್ಲಿ ನಿಮ್ಮ ಷಡ್ಯಂತ್ರ ಏನಾದರೂ ಇದೆಯಾ?

ನಮ್ಮ ನಾಯಕರ ವಿರುದ್ಧ ಏನು ಶಡ್ಯಂತ್ರ ಮಾಡಿದ್ದೀರಿ ಮೊದಲ ಸ್ಪಷ್ಟಪಡಿಸಿ.ಯಾವ ಹಾವನ್ನು ಬಿಡ್ತೀರೋ ಕಾದು ನೋಡೋಣ ಎಂದರು.

ಹಿಂದೂ ಧರ್ಮ ಬಿಜೆಪಿಗರ ಸ್ವತ್ತಾ? ಡಿಕೆಶಿ ಪ್ರಶ್ನೆಗೆ ತಿರುಗೇಟು ನೀಡಿದ ಶೋಭಾ,ಹೌದು, ಖಂಡಿತವಾಗಿಯೂ ಕರಾವಳಿಯನ್ನು ನಾವು ದತ್ತು ತಗೊಂಡಿದ್ದೇವೆ.ಕರ್ನಾಟಕ ಕರಾವಳಿ ನಮ್ದೇ.ಉಡುಪಿಯ ಐವರು ಶಾಸಕರು ಬಿಜೆಪಿಯವರೇ. ಈ ಭಾಗವನ್ನು ದತ್ತು ತಗೊಳ್ತೇವೆ, ಅಭಿವೃದ್ಧಿನೂ ಮಾಡುತ್ತೇವೆ.

ಕಾಂಗ್ರೆಸ್ ಜನವಿರೋಧಿ ನೀತಿಗೆ ಕರಾವಳಿ ಜನ ತಕ್ಕ ಪಾಠ ಕಲಿಸಿದ್ದಾರೆ.ಡಿಕೆ ಶಿವಕುಮಾರ ಯಾವ ಆಟವೂ ಕರಾವಳಿಯಲ್ಲಿ ನಡೆಯಲ್ಲ.ದೇವರ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಾ ಇಲ್ಲ.

ನಾವು ದೇವರ ಪರ ನಿಂತವರು. ಡಿಕೆಶಿ ಚುನಾವಣೆ ಬಂದಾಗ ದೇವಸ್ಥಾನ ತಿರುಗುತ್ತಾರೆ ಎಂದು ಹೇಳಿದರು.

Edited By : Manjunath H D
Kshetra Samachara

Kshetra Samachara

30/11/2020 12:21 pm

Cinque Terre

15.61 K

Cinque Terre

6

ಸಂಬಂಧಿತ ಸುದ್ದಿ