ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಮಲಶಿಲೆ, ಕೊಲ್ಲೂರು ದೇಗುಲಕ್ಕೆ ಡಿಕೆಶಿ ಭೇಟಿ; ಪೂಜೆಯಲ್ಲಿ ಭಾಗಿ

ಉಡುಪಿ: ಉಡುಪಿ ಪ್ರವಾಸ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾತ್ರಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ದೇಗುಲಕ್ಕೆ ಭೇಟಿ ನೀಡಿದರು.ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ಅವರು,ರಾತ್ರಿಯ ಮಹಾಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ದೇವಸ್ಥಾನದಲ್ಲಿ ಅನ್ನ ಪ್ರಸಾದ ಸ್ವೀಕರಿಸಿದ ಡಿಕೆಶಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದರು.

ಇಂದು ಕೊಲ್ಲೂರಿನಲ್ಲಿ ಪೂಜೆಯ ಬಳಿಕ ಉಡುಪಿಗೆ ಆಗಮಿಸಲಿದ್ದಾರೆ. ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಆಯೋಜನೆಗೊಂಡಿದೆ. ಉಡುಪಿಯಲ್ಲಿ ಶ್ರೀ ಕೃಷ್ಣಮಠ ಭೇಟಿಯ ಕಾರ್ಯಕ್ರಮವೂ ನಿಗದಿಯಾಗಿದೆ. ಡಿಕೆಶಿಯವರನ್ಬು ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸ್ವಾಗತಿಸಲಾಯಿತು.

Edited By : Manjunath H D
Kshetra Samachara

Kshetra Samachara

29/11/2020 10:04 am

Cinque Terre

12.41 K

Cinque Terre

2

ಸಂಬಂಧಿತ ಸುದ್ದಿ