ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಕಾಪು ಶಾಸಕ ಲಾಲಾಜಿ ಮೆಂಡನ್ ಗೆ ಸಚಿವ ಸ್ಥಾನ ನೀಡಿ"

ಮಂಗಳೂರು: ಕರಾವಳಿ ಜಿಲ್ಲೆಗಳಿಂದ ಆಯ್ಕೆಯಾಗಿರುವ ಏಕೈಕ ಮೊಗವೀರ ಸಮುದಾಯದ ಶಾಸಕ ಲಾಲಾಜಿ ಮೆಂಡನ್ ಅವರಿಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಮಂಗಳೂರಿನ ಧರ್ಮ ರಕ್ಷಣಾ ಮೊಗವೀರ ವೇದಿಕೆ ಸರಕಾರವ ನ್ನು ಒತ್ತಾಯಿಸಿದೆ.

ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆ ನಡೆಯುತ್ತಿರುವ ಬೆನ್ನಿಗೇ ಮೊಗವೀರ ಸಮುದಾಯದ ಮಂದಿ ಈ ಬೇಡಿಕೆ ಮುಂದಿರಿಸಿದ್ದಾರೆ‌. ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಲಾಲಾಜಿ ಅವರು ಸರಳ ಸಜ್ಜನ ರಾಜಕಾರಣಿಯಾಗಿದ್ದಾರೆ.‌ ಆದ್ದರಿಂದ ಅವರಿಗೆ ಸೂಕ್ತ ಸಚಿವ ಸ್ಥಾನ ಒದಗಿಸುವಂತೆ ವೇದಿಕೆ ಅಧ್ಯಕ್ಷ ನಿಕಿತ್ ಎನ್. ಶ್ರೀಯಾನ್ ಒತ್ತಾಯಿಸಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನವೀನ್ ಚಂದ್ರ ಶ್ರೀಯಾನ್, ಭರತ್ ಕುಮಾರ್ ಕೂಳೂರು, ತುಳಸಿ ಶ್ರೀಯಾನ್ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

28/11/2020 04:42 pm

Cinque Terre

9.5 K

Cinque Terre

0

ಸಂಬಂಧಿತ ಸುದ್ದಿ