ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಿಜೆಪಿಯವರೇನು ಕತ್ತೆ ಕಾಯ್ತಿದ್ದರಾ? ನಳಿನ್ ಹೇಳಿಕೆಗೆ ಸೊರಕೆ ಕಿಡಿ

ಉಡುಪಿ: ಸಿದ್ದರಾಮಯ್ಯ ಸರಕಾರ ಡ್ರಗ್ಸ್ ಮಾಫಿಯಾ ಜೊತೆ ನಂಟು ಹೊಂದಿತ್ತು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹಾಗಾದರೆ ಬಿಜೆಪಿಯವರೇನು ಆಗ ಕತ್ತೆ ಕಾಯುತ್ತಿದ್ದರೇ ಎಂದು ಕಿಡಿಕಾರಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಈಗ ಒಂದು ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ಇವರೇನು ಮಾಡುತ್ತಿದ್ದಾರೆ? ಹಿಂದಿನ ಮೈತ್ರಿ ಸರ್ಕಾರ ಡ್ರಗ್ಸ್ ಮಾಫಿಯಾ ಜೊತೆ ನಂಟು ಹೊಂದಿದ್ದರೆ ಇವರು ವಿಧಾನಸಭೆಯಲ್ಲಿ ಯಾಕೆ ಮೌನ ವಹಿಸಿದ್ದರು? ಇವರು ಆಗ ಮಾತನಾಡಬಹುದಿತ್ತಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಗ್ರಾಮ ಪಂಚಾಯತ್ ಚುನಾವಣೆ ಬಂದಿದೆ. ಹೀಗಾಗಿ ಇವರು ಎಲ್ಲವನ್ನೂ ಸಿದ್ದರಾಮಯ್ಯನವರ ಮೇಲೆ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ.ಇದು ಫಲ ಕೊಡುವುದಿಲ್ಲ ಎಂದು ವಿನಯ್ ಕುಮಾರ್ ಸೊರಕೆ ಹೇಳಿದರು.

Edited By : Manjunath H D
Kshetra Samachara

Kshetra Samachara

28/11/2020 12:49 pm

Cinque Terre

13.35 K

Cinque Terre

7

ಸಂಬಂಧಿತ ಸುದ್ದಿ