ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಕರ್ನಾಟಕದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಕ್ರೈಸ್ತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು..ಅಡ್ವೆಕೇಟ್ ಎ.ಸಿ ಜಯರಾಜ್

ಕಡಬ: ಕರ್ನಾಟಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಬಜೆಟ್ ಅಧಿವೇಶನದಲ್ಲಿ ಕ್ರೈಸ್ತರಿಗಾಗಿ ಪ್ರತ್ಯೇಕವಾಗಿ ಕರ್ನಾಟಕ ರಾಜ್ಯ ಕ್ರೈಸ್ತರ ಅಭಿವೃದ್ಧಿ ನಿಗಮವನ್ನು ಘೋಷಿಸಿ ಸುಮಾರು ಇನ್ನೂರು ಕೋಟಿ ಹಣವನ್ನು ಮೀಸಲಿಡುವುದಾಗಿ ಘೋಷಣೆ ಮಾಡಿದ್ದರು.

ಈಗಿನ ಮುಖ್ಯಮಂತ್ರಿ ಮಾನ್ಯ ಯಡಿಯೂರಪ್ಪ ನವರು ಕ್ರೈಸ್ತರ ಅಭಿವೃದ್ಧಿ ನಿಗಮಕ್ಕೆ ಐವತ್ತು ಕೋಟಿ ನೀಡುವುದಾಗಿ ಹೇಳಿದರು. ಆದರೆ ಕಳೆದ ಜೂನ್ ತಿಂಗಳಲ್ಲಿ ಕ್ರೈಸ್ತರ ಅಭಿವೃದ್ಧಿ ನಿಗಮ ಸ್ಥಾಪಿಸುವ ಬದಲು ‌ಇದನ್ನು ಕೈಬಿಡಲಾಯಿತು. ಆದರಿಂದ ಕೂಡಲೇ ಮಾನ್ಯ ಮುಖ್ಯಮಂತ್ರಿ ಗಳು ಕೂಡಲೇ ಕ್ರೈಸ್ತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಕರ್ನಾಟಕ ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ಸಮಿತಿ ರಾಜ್ಯ ಅಧ್ಯಕ್ಷರಾದ ಎಡ್ವೋಕೇಟ್ ಎ.ಸಿ ಜಯರಾಜ್ ರವರು ಹೇಳಿದರು.

ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಸುಮಾರು 30 ರಿಂದ 35 ಲಕ್ಷದಷ್ಟು ಕ್ರೈಸ್ತರು ಇದ್ದು,ಅದರಲ್ಲಿ ಮಲಯಾಳಂ, ತಮಿಳು, ಕೊಂಕಣಿ, ತೆಲುಗು, ಕನ್ನಡ ಭಾಷಿಗರು ಇದ್ದಾರೆ.ಕ್ರೈಸ್ತ ಸಮುದಾಯವು ಸ್ವಾತಂತ್ರ್ಯ ಪೂರ್ವದಿಂದಲೇ ಕರ್ನಾಟಕ ರಾಜ್ಯಕ್ಕೆ ಸೇರಿದಂತೆ ದೇಶದಲ್ಲಿ ಆಸ್ಪತ್ರೆಗಳು, ಶಾಲೆ-ಕಾಲೇಜುಗಳು,ಕುಷ್ಠರೋಗ, ಏಡ್ಸ್ ರೋಗಿಗಳ ಶುಶ್ರೂಷಾ ಕೇಂದ್ರಗಳು,ಅನಾಥ ಆಶ್ರಮಗಳನ್ನು ಸ್ಥಾಪನೆ ಮಾಡಿ ನಿರಂತರವಾಗಿ ಬಡಜನರ, ಹಾಗೂ ರಾಷ್ಟ್ರದ ಸೇವೆ ಮಾಡುತ್ತಾ ಬಂದರೂ ಅಲ್ಪಸಂಖ್ಯಾತ ಕ್ರೈಸ್ತರ ಉನ್ನತಿಗಾಗಿ ಸರಕಾರವು ಒಂದು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿಲ್ಲ.

ಅಲ್ಪಸಂಖ್ಯಾತ ನಿಗಮದಲ್ಲಿ ಮೀಸಲಿಡುವ ಹಣವು ಹೆಚ್ಚಾಗಿ ಮುಸ್ಲಿಂ ಸಮುದಾಯದ ಪಾಲಾಗುತ್ತಿದೆ.ಆದುದರಿಂದ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿರುವ ಸುಮಾರು 35 ಲಕ್ಷ ಕ್ರೈಸ್ತರಿಗಾಗಿ ಪ್ರತ್ಯೇಕವಾಗಿ ಕರ್ನಾಟಕ ರಾಜ್ಯ ಕ್ರೈಸ್ತರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಒತ್ತಾಯ ಮಾಡಿದರು. ಕರ್ನಾಟಕ ರಾಜ್ಯ ಕ್ರೈಸ್ತರ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಡಬ ತಾಲೂಕು ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ ವರ್ಗೀಸ್,ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ಕಡಬ ತಾಲೂಕು ಅಧ್ಯಕ್ಷ ಕ್ಸೇವಿಯರ್ ಬೇಬಿ,ಕಾರ್ಯದರ್ಶಿ ಯೋಹನ್ನಾನ್ ಲಾಲೂ,ಉಪಾಧ್ಯಕ್ಷ ಸಿ.ಜೆ ಸೈಮನ್, ಪ್ರಮುಖರಾದ ರಾಯ್ ಅಬ್ರಹಾಂ, ಕೆ.ಟಿ ವಲ್ಸಮ್ಮ,ವರ್ಗೀಸ್, ತೋಮಸ್ ಇಡಯಾಳ,ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

26/11/2020 06:41 pm

Cinque Terre

9.89 K

Cinque Terre

3

ಸಂಬಂಧಿತ ಸುದ್ದಿ