ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರೊ.ಬಿ.ಎಂ. ಇಚ್ಲಂಗೋಡು ಸಂಗ್ರಹ ಲೇಖನ ಕೃತಿ ಬಿಡುಗಡೆ

ಮಂಗಳೂರು: ಬ್ಯಾರಿ ಆಂದೋಲನ ಕುರಿತಾದ ಪ್ರೊ.ಬಿ.ಎಂ. ಇಚ್ಲಂಗೋಡು ಅವರ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಹಾಗೂ ಆಯ್ದ ಲೇಖನಗಳ ಸಂಗ್ರಹದ 'ಬ್ಯಾರಿ ಆಂದೋಲನದಲ್ಲಿ ಪ್ರೊ. ಬಿ.ಎಂ.ಇಚ್ಲಂಗೋಡು' ಅನ್ನೋ ಪುಸ್ತಕವನ್ನು ನಗರದ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಳಿಸಲಾಯಿತು.

ಬ್ಯಾರಿ ಸಾಹಿತ್ಯ ಅಕಾಡೆಮಿಯ ಬಶೀರ್ ಬೈಕಂಪಾಡಿ ಪುಸ್ತಕ ಬಿಡುಗಡೆಗೊಳಿಸಿದರು. ಕನ್ನಡ ಸಂಘ ಮೂಡುಬಿದಿರಿ ಅಡಿ ಪ್ರಕಟಗೊಂಡ ಈ ಕೃತಿಯ ಕುರಿತು ಬಶೀರ್ ಬೈಕಂಪಾಡಿ ಮಾತನಾಡಿದರು. ಪ್ರೊ.ಬಿ‌.ಎಂ. ಇಚ್ಲಂಗೋಡು ಮಾತನಾಡಿ, ಹಲವು ದಶಕಗಳ ಹಿಂದೆ ಬ್ಯಾರಿ ಎನ್ನಲು ಸಮುದಾಯದ ನಡುವೆ ಸಾಕಷ್ಟು ಕೀಳರಿಮೆ ಇತ್ತು.

ಆದರೆ, ಇಂದು ಕಾಲ ಬದಲಾಗಿದೆ, ಬ್ಯಾರಿ ಸಮುದಾಯದ ವ್ಯಕ್ತಿ ಎಂದು ಗುರುತಿಸಿಕೊಳ್ಳಲು ಜನ ಇಷ್ಟ ಪಡುತ್ತಾರೆ. ಬ್ಯಾರಿ ಅನ್ನೋದು ಜಾತಿ ಅಲ್ಲ, ಅದೊಂದು ಕಸುಬಿನಿಂದ ಬಂದ ಹೆಸರಾಗಿದೆ. ಬ್ಯಾರಿ ಸಮುದಾಯ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ ಎಂದರು.

Edited By : Manjunath H D
Kshetra Samachara

Kshetra Samachara

25/11/2020 06:59 pm

Cinque Terre

13.67 K

Cinque Terre

0

ಸಂಬಂಧಿತ ಸುದ್ದಿ