ಮುಲ್ಕಿ: ಸುರತ್ಕಲ್ ಸಮೀಪದ ಕಾನಾ ಆಶ್ರಯ ಕಾಲನಿಗೆ ಹೋಗುವ ಪರಿಶಿಷ್ಟ ಜಾತಿ ಪಂಗಡ ವಾಸಿಸುವ ಪ್ರದೇಶದಲ್ಲಿಒಳಚರಂಡಿ ಸೋರಿಕೆಯಾಗಿ ಸುಮಾರು 8 ಕ್ಕೂ ಅಧಿಕ ಬಾವಿ ಹಾಳಾಗಿದ್ದರೆ ಇನ್ನೊಂದೆಡೆ ರಸ್ತೆಯಲ್ಲಿ ಕೊಳಚೆ ನೀರು ಹರಿದು ಸಮಸ್ಯೆಯಾಗುತ್ತಿದ್ದ ಜನರು ಆಕ್ರೋಶ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಾಜಿ ಶಾಸಕ ಮೊಯಿದೀನ್ ಬಾವಾ ಆಗಮಿಸಿ ವೀಕ್ಷಿಸಿದರು.ದೂರವಾಣಿ ಮೂಲಕ ಆಯುಕ್ತರಿಗೆ ಮಾತನಾಡಿ ಯುಜಿಡಿ ಅಧಿಕಾರಿಗಳನ್ನು ಕಳಿಸಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.ಇದೇ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿ ತಾನು ಶಾಸಕನಾಗಿದ್ದಾಗ 51 ,ಕೋಟಿ ಅಮೃತ್ ಯೋಜನೆಯಲ್ಲಿ ಇಡಲಾಗಿತ್ತು.ಆದರೆ ಇದುವರೆಗೂ ಕಾಮಗಾರಿ ಅಗಿಲ್ಲ.
ಬಡಜನತೆಯನ್ನು ಕೇಳುವವರಿಲ್ಲ. ಈಗಿನ ಶಾಸಕರು ಮಲಗಿದಂತೆ ಕಾಣುತ್ತಿದೆ. ಇಲ್ಲಿನ ಜನರು ನೆಮ್ಮದಿಯಿಂದ ವಾಸಿಸಲು ಆಗುತ್ತಿಲ್ಲ.ದುರ್ವಾಸನೆ ಹರಡಿದೆ. ಕೂಡಲೇ ಸರಿಪಡಿಸದಿದ್ದಲ್ಲಿ ಮುಂದಿನ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
Kshetra Samachara
24/11/2020 10:13 pm