ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಕ್ರೈಸ್ತ ಅಭಿವೃದ್ಧಿ ನಿಗಮಕ್ಕಾಗಿ ಬೀದಿಗಿಳಿಯಲೂ ಸಿದ್ಧ"

ಮಂಗಳೂರು: ಕ್ರೈಸ್ತ ಸಮುದಾಯದಲ್ಲೂ ಬಡವರಿದ್ದು, ತಕ್ಷಣವೇ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸರಕಾರ ಸ್ಥಾಪಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ, ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ಅನುಮೋದನೆ ನೀಡುವುದಾಗಿ ತಿಳಿಸಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಆ ಬಳಿಕ ಅದನ್ನು ಕೊರೊನಾ ಸಮಯದಲ್ಲಿ ರದ್ದು ಮಾಡಿದ್ದಾರೆ.

ಪತ್ರಿಕೆಯಲ್ಲಿ ಜಾಹೀರಾತು ನೀಡಿ ಕ್ರೈಸ್ತ ನಿಗಮಕ್ಕೆ ಅನುಮೋದನೆ ನೀಡಿದ್ದಾಗಿ ಹೇಳಿದ್ದರು. ನಿಗಮಕ್ಕಾಗಿ 50 ಕೋಟಿ ರೂ. ಘೋಷಣೆ ಮಾಡಿದ್ದರು. ಆದರೆ, ನಿಗಮ ರದ್ದುಪಡಿಸಿರುವ ಸಿಎಂ, ಆ 50 ಕೋಟಿ ಎಲ್ಲಿ ಹೋಯಿತು ಅನ್ನೋದನ್ನು ರಾಜ್ಯದ ಜನತೆಗೆ ತಿಳಿಸಲಿ. ಕ್ರೈಸ್ತ ಸಮುದಾಯದ ಮೌನ ಅನ್ನೋದು ಅವರ ವೀಕ್ನೆಸ್ ಅಂದ್ಕೊಳ್ಳೋದು ಬೇಕಿಲ್ಲ. ಸರಕಾರ ಕ್ರೈಸ್ತರನ್ನ Under estimate ಮಾಡಿದ್ರೆ, ಜನರನ್ನು ಹೋರಾಟಕ್ಕೆ ಧುಮ್ಮಿಕ್ಕುವಂತೆ ಮಾಡಲು ಗೊತ್ತಿದೆ. ಸಿಎಂ ಕ್ರೈಸ್ತರನ್ನು ಮಂಗಗಳು ಅನ್ನೋದಾಗಿ ಭಾವಿಸಿಕೊಳ್ಳೋದು ಬೇಕಿಲ್ಲ, ತಕ್ಷಣವೇ ರದ್ದುಪಡಿಸಲಾದ ಕ್ರೈಸ್ತ ಅಭಿವೃದ್ಧಿ ನಿಗಮದ ಅನುಮೋದನೆಯನ್ನು ಮರು ಜಾರಿಗೊಳಿಸಬೇಕು. ಇಲ್ಲದಿದ್ದಲ್ಲಿ ಕ್ರೈಸ್ತರು ಬೀದಿಗೆ ಬಂದರೆ ಅದಕ್ಕೆ ಸರಕಾರವೇ ನೇರ ಹೊಣೆ ಎಂದರು.

Edited By : Nagesh Gaonkar
Kshetra Samachara

Kshetra Samachara

18/11/2020 01:53 pm

Cinque Terre

14.07 K

Cinque Terre

5

ಸಂಬಂಧಿತ ಸುದ್ದಿ