ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಜಿಮಠ:ಕೃಷಿಕರಿಗೆ ಮೀನು ಸಾಕಾಣಿಕೆ ಮಾಹಿತಿ ಶಿಬಿರ

ಗಂಜಿಮಠ :ಮೀನು ಸಾಕಾಣೆಯ ಬಗ್ಗೆ ಮಾಹಿತಿಯ ಕೊರತೆ ಇದ್ದು, ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಾಹಿತಿ ಕಾರ್ಯಗಾರ ಆಯೋಜಿಸಲಾಗಿದೆ. ಕೃಷಿಕರು ಇತರ ಕೃಷಿಯ ಜೊತೆಗೆ ಮೀನು ಸಾಕಾಣೆಯಲ್ಲಿ ತೊಡಗಿಸಿಕೊಂಡು ಹೆಚ್ಚಿನ ಲಾಭ ಪಡೆಯಲು ಮುಂದಾಗಬೇಕು ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ಹೇಳಿದರು.

ಅವರು ಇಂದು ಒಡ್ಡೂರು ಗಂಜಿಮಠ ಒಡ್ಡೂರು ಫಾರ್ಮ್ ನಲ್ಲಿ ಮೀನುಗಾರಿಕಾ ಇಲಾಖೆಯಿಂದ ನಡೆದ ಒಳನಾಡು ಕೃಷಿ ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಎಸ್ ಅಂಗಾರ, ಶಾಸಕರಾದ ರಾಜೇಶ್ ನಾಯ್ಕ್, ತೆಂಕ ಎಡಪದವು ಗ್ರಾ.ಪ ಅಧ್ಯಕ್ಷ ಸುಕುಮಾರ್, ಗಂಜಿಮಠ ಗ್ರಾ.ಪ ಅಧ್ಯಕ್ಷ ನೋಣಯ್ಯ, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ವಿಜ್ಞಾನಿಗಳು ಉಪಸ್ಥಿತರಿದ್ದರು.

ಮತ್ಸ್ಯ ಆಶ್ರಯ ವಸತಿ ಯೋಜನೆಯಡಿ ಮಂಜೂರಾದ ಮನೆ ಮಂಜೂರಾತಿ ಆದೇಶ ಪತ್ರ ಹಾಗೂ ಸಹಾಯಧನವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

Edited By :
Kshetra Samachara

Kshetra Samachara

12/02/2022 04:44 pm

Cinque Terre

4.04 K

Cinque Terre

0

ಸಂಬಂಧಿತ ಸುದ್ದಿ