ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶಿರಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲ್ಲಲಿದೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್

ಮಂಗಳೂರು: ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಈ ದಿನ ತೆರೆ ಬೀಳಲಿದೆ. ಆರ್ ಆರ್ ನಗರ, ಶಿರಾ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದ್ದು, ಬಿಜೆಪಿ ಪರ ಅಲೆ ಇದೆ ಎಂದು ಮಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು, ಶಿರಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲ್ಲಲಿದೆ. ಜನರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿಎಸ್ ವೈ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ.

ಅತ್ತ ಕಾಂಗ್ರೆಸ್, ಜೆಡಿಎಸ್ ಸೋಲಿನ ಭೀತಿ ಎದುರಿಸುತ್ತಿದೆ. ಆ ಕಾರಣಕ್ಕಾಗಿ ಭಾವನಾತ್ಮಕ, ಜಾತಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ ನಳಿನ್, ಪಕ್ಷದಲ್ಲಿ ಬೈ ಎಲೆಕ್ಷನ್ ಫಲಿತಾಂಶದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಈ ಚುನಾವಣೆ ರಾಜ್ಯ ಆಡಳಿತದ ಮೇಲೆ ಪರಿಣಾಮ ಬೀರದು. ಈಗಾಗಲೇ ಪಕ್ಷ 117 ಸ್ಥಾನ ಗಳಿಸಿ ಭದ್ರವಾಗಿದೆ. ಬಿಜೆಪಿ ಯಾವುದೇ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದರು. ಇನ್ನು ಸಿಎಂ ಸ್ಥಾನ ಕುರಿತ ಯತ್ನಾಳ್ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ಈಗಾಗಲೇ ಯತ್ನಾಳ್ ಜತೆ ಮಾತನಾಡಲಾಗಿದೆ. ಶಿಸ್ತು ಕ್ರಮದ ಬಗ್ಗೆ ಅವರಿಗೆ ಹೇಳಲಾಗಿದೆ. ಯಾವುದೋ ಹಂತದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು.

Edited By : Nagesh Gaonkar
Kshetra Samachara

Kshetra Samachara

01/11/2020 02:47 pm

Cinque Terre

18.64 K

Cinque Terre

6

ಸಂಬಂಧಿತ ಸುದ್ದಿ