ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೆಪಿ ನಂಜುಂಡಿ ವಿರುದ್ಧ ದೈವಜ್ಞ ಬ್ರಾಹ್ಮಣರ ಸಂಘ ಆಕ್ರೋಶ

ಮಂಗಳೂರು: ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕೆಪಿ ನಂಜುಂಡಿಯವರು ದೈವಜ್ಞ ಬ್ರಾಹ್ಮಣ ಸಮಾಜದ ವಿರುದ್ಧ ದುರುದ್ದೇಶಪೂರ್ವಕವಾದ ಹೇಳಿಕೆ ನೀಡುತ್ತಿರುವುದಕ್ಕೆ ದೈವಜ್ಞ ಬ್ರಾಹ್ಮಣರ ಸಂಘ ಖಂಡನೆ ವ್ಯಕ್ತಪಡಿಸಿದೆ.

ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೈವಜ್ಞ ಬ್ರಾಹ್ಮಣರ ಸಂಘದ ಮುಖಂಡರು, ಕೆ.ಪಿ‌ ನಂಜುಂಡಿಯವರು ದೈವಜ್ಞ ಬ್ರಾಹ್ಮಣ ಸಮಾಜವನ್ನು ಹೀಯಾಳಿಸುತ್ತಾ ಹಲವಾರು ಬಾರಿ ಹೇಳಿಕೆ ನೀಡಿದ್ದಾರೆ.

ದೈವಜ್ಞ ಬ್ರಾಹ್ಮಣ ಸಮಾಜದ ಬಗ್ಗೆ ಬಹಳ ಹಗುರವಾಗಿ ಹಾಗೂ ಕೆಟ್ಟದಾಗಿ ಬಣ್ಣಿಸಿ ಮಾತನಾಡುವ ಪ್ರವೃತ್ತಿಯನ್ನು ಹಾಗೇ ಮುಂದುವರೆಸಿಕೊಂಡು ಬಂದಿರುವುದು ಬಹಳ ನೋವಿನ ಸಂಗತಿಯಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ಗೌರವಾನ್ವಿತ ವಿಧಾನ ಪರಿಷತ್ ಸದಸ್ಯರಾಗಿರುವ ಇವರು ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡುತ್ತಾ ನೀಡಿರುವ ಹೇಳಿಕೆಗಳಿಂದ ಮನಸ್ಸಿಗೆ ನೋವಾಗಿದೆ.

ದೈವಜ್ಞರು ಮುದ್ದೆ ಕದಿಯುವವರು, ದೈವಜ್ಞರು ಕಾಳಿಕಾ ದೇವಿಯ ಆರಾಧನೆ ಮಾಡೋದಿಲ್ಲವಂತೆ. ಇವರನ್ನು ವಿಶ್ವಕರ್ಮ ನಿಗಮದಿಂದ ಕಿತ್ತೊಗೆಯಬೇಕು. ಫೇಸ್ಬುಕ್ ಲೈವ್ ನಲ್ಲಿ ಅವಹೇಳನ ಮಾಡುವುದು ಇದೆಲ್ಲವೂ ನಮ್ಮ ಸಮಾಜಕ್ಕೆ ಮಾಡಿರುವ ಅವಹೇಳನಕಾರಿ ಹೇಳಿಕೆಯಾಗಿದೆ. ಹೀಗಾಗಿ ಈ ಎಲ್ಲಾ ಅಸಂಗತ ಅಪ್ರಸ್ತುತ ಹಾಗೂ ಜಾತಿ ಬೇಧದ ವಿಷಯವನ್ನು ಸಮಾಜಕ್ಕೆ ಉಣಿಸುತ್ತಿರುವ ಕೆ.ಪಿ ನಂಜುಂಡಿ ಅವರ ಮನೋಸ್ಥಿತಿಗೆ ಧಿಕ್ಕಾರ ಎಂದರು. ಕೂಡಲೇ ಸರ್ಕಾರ ಇವರ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ದೈವಜ್ಞ ಬ್ರಾಹ್ಮಣರ ಸಂಘದ ಅಧ್ಯಕ್ಷ ಕೆ.ಸುಧಾಕರ್ ಶೇಟ್, ಮುಖಂಡರಾದ ಎಂ. ಅಶೋಕ್ ಶೇಟ್, ಪುಷ್ಪಾ ಶೇಟ್ ಇನ್ನಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

30/10/2020 10:41 pm

Cinque Terre

11.38 K

Cinque Terre

1

ಸಂಬಂಧಿತ ಸುದ್ದಿ