ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಚ್ಚಿಲ: ತೆರವುಗೊಳಿಸುವುದೇ ಆದರೆ ಎಲ್ಲಾ ಗೂಡಂಗಡಿ ತೆರವುಗೊಳಿಸಿ; ಶಾಸಕ ಲಾಲಾಜಿ

ವರದಿ: ಶಫೀ ಉಚ್ಚಿಲ

ಉಚ್ಚಿಲ: ರಾಷ್ಟ್ರೀಯ ಹೆದ್ದಾರಿ ಪಕ್ಕದ ಗೂಡಂಗಡಿ ತೆರವುಗೊಳಿಸುವುದಾದರೆ ಎಲ್ಲಾ ಗೂಡಂಗಡಿಗಳನ್ನು ತೆರವುಗೊಳಿಸಲಿ. ಕೇವಲ ಒಬ್ಬರನ್ನು ಗುರಿಪಡಿಸುವುದು ಸರಿಯಲ್ಲ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಳದ ಸ್ವಾಗತ ಗೋಪುರ ಸಮೀಪದಲ್ಲಿರುವ ಅಂಗಡಿ ವ್ಯಾಪಾರಸ್ಥರ ನಡುವಿನ ವಿವಾದ ವಿಚಾರವಾಗಿ ಮಾಧ್ಯಮ ಪ್ರತಿನಿಧಿಯ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನೇಕ ಗೂಡಂಗಡಿ, ಮೀನು ಮಾರಾಟಗಾರರು, ತರಕಾರಿ- ಹಣ್ಣು ಗಳ ಅಂಗಡಿಗಳು ಕಾಣಸಿಗುತ್ತವೆ.

ಇಂತಹ ಸಂದರ್ಭ ಕೇವಲ ಉಚ್ಚಿಲದಲ್ಲಿರುವ ಹಿರಿಯರೊಬ್ಬರ ಅಂಗಡಿ ತೆರವಿಗೆ ಮುಂದಾಗುವುದು ಸರಿಯಲ್ಲ. ತೆರವುಗೊಳಿಸುವುದಾದರೆ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿ ಎಂದು ಈಗಾಗಲೇ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

Edited By : Manjunath H D
Kshetra Samachara

Kshetra Samachara

24/10/2020 10:40 pm

Cinque Terre

13.66 K

Cinque Terre

2

ಸಂಬಂಧಿತ ಸುದ್ದಿ