ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಿಥುನ್ ರೈ ನಿಜವಾದ ಹಿಂದೂ ನಾಯಕ: ಕಾಂಗ್ರೆಸ್ ಎಸ್ಸಿ -ಎಸ್ಟಿ ಘಟಕ ಮುಖಂಡರ ಉವಾಚ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸದ್ಯ ಚರ್ಚೆಯಲ್ಲಿದ್ದಾರೆ. ಮಿಥುನ್ ರೈಯವರ ಹಿಂದುತ್ವದ ಬಗ್ಗೆ ಬಿಜೆಪಿಗೇನು ಗೊತ್ತು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಎಸ್ಸಿ -ಎಸ್ಟಿ ಘಟಕದ ಮುಖಂಡರು ಪ್ರಶ್ನಿಸಿದ್ದಾರೆ.

ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಎಸ್ಸಿ -ಎಸ್ಟಿ ಘಟಕದ ಅಧ್ಯಕ್ಷ ಶೇಖರ ಕುಕ್ಕೇಡಿ ಮತ್ತು ರಘುರಾಜ್ ಕದ್ರಿ ಅವರು ಮಿಥುನ್ ರೈ ನಿಜವಾದ ಹಿಂದೂ ನಾಯಕ.

ಅವರು ಅನೇಕ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ನೆರವು ನೀಡಿದ್ದಾರೆ. ೧೫೦ಕ್ಕೂ ಹೆಚ್ಚು ಗೋವುಗಳನ್ನು ದಾನ ಮಾಡಿದ್ದಾರೆ. ಹೀಗಾಗಿ ಮಿಥುನ್ ರೈ ಅವರ ಹಿಂದುತ್ವದ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದರು.

ಉತ್ತರ ಪ್ರದೇಶದಲ್ಲಿ ದಲಿತ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಕೃತ್ಯ ನಡೆಯುತ್ತಲೇ ಇದೆ. ಯು.ಪಿ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವೈಫಲ್ಯದ ಬಗ್ಗೆ ಮಿಥುನ್ ರೈ ಮಾತನಾಡಿದ್ದಾರೆ ವಿನಹ ಯಾವುದೇ ಸಮುದಾಯವನ್ನು ಅವಮಾನಿಸುವ ಹೇಳಿಕೆ ನೀಡಿಲ್ಲ.

ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಮೇಲೆ ದೈಹಿಕ ಹಲ್ಲೆಗಳಾದಾಗ ಮಾತನಾಡದ ಬಿಜೆಪಿಗರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರ ಆಡಳಿತ ವೈಫಲ್ಯದ ವಿರುದ್ಧ ಧ್ವನಿ ಎತ್ತಿರುವುದಕ್ಕೆ ಅಪಸ್ವರ ಎತ್ತುವುದು ಯಾವ ನ್ಯಾಯ ಎಂದು ಕಿಡಿಕಾರಿದರು.

ನಮ್ಮ ಜಿಲ್ಲೆಯ ಬಿಜೆಪಿಯವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ದಲಿತರ ಮೇಲಾಗುವ ಅನ್ಯಾಯದ ವಿರುದ್ಧ ಮೊದಲು ಧ್ವನಿ ಎತ್ತಲಿ ಎಂದು ಸವಾಲೆಸೆದರು.

Edited By :
Kshetra Samachara

Kshetra Samachara

13/10/2020 10:35 pm

Cinque Terre

14.32 K

Cinque Terre

10

ಸಂಬಂಧಿತ ಸುದ್ದಿ