ಉಡುಪಿ: ಉತ್ತರ ಪ್ರದೇಶದ ಮುಖ್ಯಮಂತ್ರಿ, ಗೋರಖ್ ಪುರ ಮಠದ ಪೀಠಾಧ್ಯಕ್ಷ ಯೋಗಿ ಆದಿತ್ಯನಾಥ್ ವಿರುದ್ಧ ದ.ಕ. ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವಹೇಳನಕಾರಿಯಾಗಿ ನಿಂದಿಸಿದ್ದಕ್ಕೆ ನಾಥ ಪಂಥ ಜೋಗಿ ಸಮಾಜದಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಸಂಬಂಧ ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಮಾಜದ ಮುಖಂಡರು, ನಾಥ ಪರಂಪರೆಯ ಪರಮೋಚ್ಚ ಗುರು ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿಯಾಗಿ ನಿಂದಿಸಿರುವ ಮಿಥುನ್ ರೈ ಇಡೀ ಹಿಂದೂ ಸಮಾಜಕ್ಕೆ ನೋವುಂಟು ಮಾಡಿದ್ದಾರೆ. ಮಿಥುನ್ ರೈ ಬಳಸಿದ ತುಚ್ಛ ಭಾಷೆ ಕರ್ನಾಟಕದ ಸಮಸ್ತ ಜೋಗಿ ಸಮಾಜಕ್ಕೆ ಆಘಾತವುಂಟು ಮಾಡಿದೆ. ಇಂತಹ ಬಾಲಿಶ ಹೇಳಿಕೆಯನ್ನು ಜೋಗಿ ಸಮಾಜ ಖಂಡಿಸುತ್ತದೆ ಎಂದು ಹೇಳಿದರು.
ಯೋಗಿ ಆದಿತ್ಯನಾಥ್ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದರೆ ಮುಖಕ್ಕೆ ಮಸಿ ಬಳಿಯುವುದಾಗಿ ಹೇಳಿರುವ ಮಿಥುನ್ ರೈಗೆ ಯೋಗಿಯವರ ಇತಿಹಾಸ ತಿಳಿದಿಲ್ಲ. ಯೋಗಿಯವರ ಬಗ್ಗೆ ಅವರು ಆಡಿರುವ ಅಪಕ್ವತೆಯ ಮಾತುಗಳನ್ನು ವಾಪಸ್ ಪಡೆದು, ಸಾರ್ವಜನಿಕವಾಗಿ ಯೋಗಿ ಆದಿತ್ಯನಾಥ್ ಅವರ ಕ್ಷಮೆ ಯಾಚಿಸಬೇಕು ಎಂದು ಜೋಗಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
Kshetra Samachara
13/10/2020 12:23 pm