ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಪೊಲೀಸರೇ, ಸಾಕ್ಷ್ಯ ನಾಶ ಪಡಿಸುವಲ್ಲಿ ಸಹಾಯ ಮಾಡಬೇಡಿ; ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ

ವರದಿ: ಶಫೀ ಉಚ್ಚಿಲ

ಕಾಪು: ಹತ್ರಾಸ್ ನಲ್ಲಿ ಅತಿ ಅಮಾನವೀಯ ಘಟನೆ ನಡೆದಿದೆ. ಇಂತಹ ಸಂದರ್ಭ ಯಾವುದೇ ಜಾತಿ, ಧರ್ಮಗಳ ವಿಚಾರ ನೋಡದೆ, ನಿರ್ಭಯ ಪ್ರಕರಣದಲ್ಲಿ ಕಾಳಜಿ ವಹಿಸಿದಂತೆ ಈ ಪ್ರಕರಣವನ್ನೂ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆಗ್ರಹಿಸಿದ್ದಾರೆ.

ಹತ್ರಾಸ್ ವಿಚಾರದಲ್ಲಿ ಪೊಲೀಸರ ನಿರ್ಲಕ್ಷ್ಯ, ದೌರ್ಜನ್ಯ ಖಂಡನೀಯ. ಲೈಂಗಿಕ ದೌರ್ಜನ್ಯಗೊಳಪಟ್ಟ ಹೆಣ್ಣುಮಗಳ ಶರೀರವನ್ನು ಅವಳ ತಂದೆ- ತಾಯಿಗೆ ಹಸ್ತಾಂತರಿಸಬೇಕಿತ್ತು. ಸಾಕ್ಷ್ಯ ನಾಶವಾಗಲಿ ಎಂದು ತರಾತುರಿಯಲ್ಲಿ ಮೃತದೇಹವನ್ನು ಪೊಲೀಸರು ಸುಟ್ಟು ಹಾಕಿದ್ದಾರೆ. ಅದು ಅತ್ಯಂತ ಅಮಾನವೀಯ ಘಟನೆ.

ಪೊಲೀಸರು ಸರಿಯಾಗಿ ಸಾಕ್ಷ್ಯ ಸಂಗ್ರಹಿಸಿ ತನಿಖೆ ಮಾಡಿ ನ್ಯಾಯ ಒದಗಿಸಬೇಕೇ ವಿನಹ ಸಾಕ್ಷಿ ನಾಶ ಪಡಿಸುವಲ್ಲಿ ಸಹಾಯ ಮಾಡಬಾರದು ಎಂದು ಅವರು ಬೇಸರ ವ್ಯಕ್ತಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

11/10/2020 03:54 pm

Cinque Terre

28.52 K

Cinque Terre

6

ಸಂಬಂಧಿತ ಸುದ್ದಿ