ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅತಿಕಾರಿಬೆಟ್ಟು- ಶಿಮಂತೂರು ಮಹಿಳಾ ಕಾಯಕೋತ್ಸವಕ್ಕೆ ಚಾಲನೆ

ಮುಲ್ಕಿ: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಅತಿಕಾರಿಬೆಟ್ಟು ಮತ್ತು ಶಿಮಂತೂರು ಗ್ರಾಮದ ಮಹಿಳೆಯರ "ಕಾಯ ಕೋತ್ಸವ" ದ ಅಂಗವಾಗಿ ಮಹಿಳೆಯರನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ತೊಡಗಿಸಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅತಿಕಾರಿ ಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್ ಹೇಳಿದರು.

ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಸರಕಾರ ಜ.15ರಿಂದ ಮಾ. 15ರ ವರೆಗೆ ಮಹಿಳಾ 'ಕಾಯಕೋತ್ಸವ' ಹಮ್ಮಿಕೊಂಡಿದ್ದು, ಅದರಂತೆ ಸುಮಾರು ಮೂರು ಲಕ್ಷ ರೂ. ವೆಚ್ಚದಲ್ಲಿ ಅತಿಕಾರಿಬೆಟ್ಟು ಗ್ರಾಮದ ನಡಿಬೆಟ್ಟು ದೈವಸ್ಥಾನದಿಂದ ಸುಂದರಿ ಮನೆಯವರೆಗೆ ಮಹಿಳಾ ಕಾಯಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಅತಿಕಾರಿಬೆಟ್ಟು ಪಂ.ಸದಸ್ಯೆ ಪದ್ಮಿನಿ ಶೆಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಶಿಮಂತೂರು ಗ್ರಾಮದಲ್ಲಿ ಇದೇ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ನರೇಗಾ ತಾಂತ್ರಿಕ ಸಹಾಯಕ ಇಂಜಿನಿಯರ್ ಅರವಿಂದ್, ಅತಿಕಾರಿಬೆಟ್ಟು ಪಂ. ಲೆಕ್ಕಿಗ ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

25/02/2021 04:38 pm

Cinque Terre

14.16 K

Cinque Terre

0