ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೊರೊನ ಎಚ್ಚರಿಕೆಯ ಮೂಲಕ ಸ್ವಚ್ಛತೆಯಿಂದ ದೇವಳದ ಉತ್ಸವ ನಡೆಸೋಣ: ಪದ್ಮಿನಿ ಶೆಟ್ಟಿ.

ಮುಲ್ಕಿ: ಮೂಲ್ಕಿಯ ಇತಿಹಾಸ ಪ್ರಸಿದ್ಧ ಶಿಮಂತೂರು ಆದಿ ಜನಾರ್ಧನ ದೇವಸ್ಥಾನ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ದೇವಳ ಹಾಗೂ ದೇವಳದ ಪರಿಸರದಲ್ಲಿ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯರ ಸಹಕಾರದೊಂದಿಗೆ ಶಿಮಂತೂರು ಯುವಕ ಹಾಗೂ ಯುವತಿ ಮಂಡಲ, ಗ್ರಾಮಸ್ಥರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ದೇವಳದ ಸುತ್ತಮುತ್ತ ಸುಮಾರು ನೂರಕ್ಕೂ ಹೆಚ್ಚು ಯುವತಿ ಮಂಡಲದ ಸದಸ್ಯರು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯೆ ಪದ್ಮಿನಿ ಶೆಟ್ಟಿ ಮಾತನಾಡಿ ಈ ಬಾರಿಯ ಜಾತ್ರಾ ಮಹೋತ್ಸವ ಕೋರೋನ ಎಚ್ಚರಿಕೆಯೊಂದಿಗೆ ಸ್ವಚ್ಛತೆಯ ಮೂಲಕ ನಡೆಯಲಿದ್ದು ಗ್ರಾಮಸ್ಥರ ಸಹಕಾರ ಅಗತ್ಯ ಎಂದರು, ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾದ ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ ಶಶಿಕಲಾ, ಕಲ್ಪನಾ ಬಲ್ಲಾಳ್, ಸ್ಥಳೀಯರಾದ ಉದಯ ಕುಮಾರ್ ಶೆಟ್ಟಿ ಅಧಿಧನ್, ಗೋಪಾಲ್ ಶಿಮಂತೂರು ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

23/02/2021 01:55 pm

Cinque Terre

12.56 K

Cinque Terre

1