ಬಾರ್ಕೂರು: ಪುರಾಣ ಪ್ರಸಿದ್ಧ ಬಾರಕೂರಿನ ಪ್ರಧಾನ ದೇಗುಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದೊಳಗೆ ಸರ್ಪ ಗೋಚರಿಸಿದ್ದು, ಭಕ್ತಾದಿಗಳಲ್ಲಿ ರೋಮಾಂಚನ ಉಂಟುಮಾಡಿತು!
ರಾತ್ರಿ ಮಕರ ಸಂಕ್ರಾಂತಿಯ ವಿಶೇಷ ಪೂಜೆ ಸುತ್ತು ಬಲಿ ಸಂದರ್ಭದಲ್ಲಿ ಹಾಗೂ ದೇವಾಲಯದ ಒಳಭಾಗದ ಪೌಳಿಯಲ್ಲಿರುವ ಶ್ರೀ ಕುಮಾರ ಸ್ವಾಮಿ ದೇವರ ಮೂರ್ತಿಯ ಮೇಲೆ ಮತ್ತು ಹೊರ ಸುತ್ತು ಬಲಿಯ ಸಂದರ್ಭದಲ್ಲಿಯೂ ಕೂಡ ಗೋಡೆಯಲ್ಲಿ ಸರ್ಪ ಹರಿದಾಡಿ ಭಕ್ತರನ್ನು ತನ್ಮಯ ಗೊಳಿಸಿತು.ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೊ ವೈರಲ್ ಆಗುತ್ತಿದೆ.
Kshetra Samachara
15/01/2021 04:30 pm