ಬಜಪೆ:ಅದ್ಯಪಾಡಿಯ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಮಾಡುವಂತೆ ತಿಳಿದುಬಂದಿದ್ದು ಪ್ರಶ್ನೆಯಲ್ಲಿ ಕಂಡುಬಂದ ಪ್ರಾಯಶ್ಚಿತ ವಿಧಿವಿಧಾನಗಳು ದೇವಸ್ಥಾನದಲ್ಲಿ ಆರಂಭಗೊಂಡಿದೆ. ದೇವಳದಲ್ಲಿ ಮುಷ್ಟಿ ಕಾಣಿಕೆ, ಏಕಾದಶ ರುದ್ರಾಭಿಷೇಕ ,ಗಣಪತಿ ಹೋಮ ,ಮಹಾ ಮೃತ್ಯುಂಜಯ ಹೋಮ ಗಳು ಕುಡುಪು ಬ್ರಹ್ಮಶ್ರೀ ನರಸಿಂಹ ತಂತ್ರಿ ನೇತೃತ್ವದಲ್ಲಿ ನಡೆಯಿತು. ವಿಧಿವಿಧಾನಗಳು ನಾಲ್ಕುದಿನಗಳ ಕಾಲ ನಡೆಯಲಿದ್ದು,ಅ.13 ರಂದು ಕೊನೆಗೊಳ್ಳಲಿದೆ.
ಈ ಸಂದರ್ಭ ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ,ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ ಶೆಟ್ಟಿ ಬೈಲು ಏತಮೊಗರು ದೊಡ್ಡಮನೆ,ಅರ್ಚಕ ಸದಾಶಿವ ಭಟ್,ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸುಜಿತ್ ಆಳ್ವ ಏತಮೊಗರುಗುತ್ತು,ಪ್ರಧಾನ ಕಾರ್ಯದರ್ಶಿ ಸುಂದರ ಬಿ.ಬಂಗೇರ ,ಶೆಡ್ಯೆ ಮುಂಜುನಾಥ ಭಂಡಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
11/10/2022 11:14 am