ಬಜಪೆ:ಬಿರುವೆರ್ ಕುಡ್ಲ ಬಜಪೆ ಘಟಕದ ಸದಸ್ಯ ಮನೋಜ್ ಜೋಕಟ್ಟೆ ಅವರ ಪರ್ಸ್ ಕಳೆದು ಹೋಗಿತ್ತು .ಪರ್ಸ್ ನಲ್ಲಿ ಅಗತ್ಯವಾದ ಡಾಕ್ಯುಮೆಂಟ್ ಇದ್ದುದರಿಂದ ತುಂಬ ಹುಡುಕಾಟದಲ್ಲಿ ಇದ್ದರು. ಪರ್ಸ್ ಕಳೆದು ಹೋದ ಬಗ್ಗೆ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್ ಕೆಂಜಾರು ಕಾನ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹರಿಯ ಬಿಟ್ಟಿದ್ದರು.
ಪರ್ಸ್ ಬಜಪೆಯ ಹಣ್ಣಿನ ವ್ಯಾಪಾರಿ ಅಮೀರ್ ಬಜಪೆ ಇವರಿಗೆ ಸಿಕ್ಕಿದ್ದು, ಘಟಕದ ಉಪಾಧ್ಯಕ್ಷ ದಿನೇಶ್ ಬಂಗೇರ ರವರ ಮುಖಾಂತರ ಅದನ್ನು ಮನೋಜ್ ರವರ ಪೋನ್ ನಂಬರ್ ನನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿ ಮನೋಜ್ ರವರಿಗೆ ಕರೆ ಮಾಡಿ ಪರ್ಸನ್ನು ಹಸ್ತಾಂತರ ಮಾಡಿದರು. ಮಾನವೀಯತೆ ಮೆರೆದ ಅಮೀರ್ ಬಜಪೆ ರವರಿಗೆ ಘಟಕದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Kshetra Samachara
25/09/2022 08:26 pm