ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ ಕೃಷ್ಣ ಸ್ವಾಮಿ ಜೋಯಿಸ್‍ ರಿಗೆ ಶ್ರೀ ಶಾಂತಿಮತೀ ಪ್ರತಿಷ್ಠಾನದ ಸಾಧಕರೆಡೆ ನಮ್ಮ ನಡೆ ಗೌರವ

ಬ್ರಹ್ಮಾವರ : ಶ್ರೀ ಶಾಂತಿಮತೀ ಪ್ರತಿಷ್ಠಾನ ದ ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಾವರದ ಶ್ರೀ ಕೃಷ್ಣ ಸ್ವಾಮಿ ಜೋಯಿಸ್ ಅವರನ್ನು ಶುಕ್ರವಾರ ಅವರ ನಿವಾಸದಲ್ಲಿ ಗೌರವಿಸಲಾಯಿತು.ಯಕ್ಷಗಾನ ಪ್ರಸಾದನ, ಮದ್ದಳೆ, ಭಾಗವತಿಕೆ, ಹಾಗೂ ಮಣ್ಣಿನಿಂದ ಗಣಪತಿ ಹಾಗೂ ಇತರ ದೇವರುಗಳ ವಿಗ್ರಹಗಳನ್ನು ತಯಾರಿಸುವ ಜೋಯಿಸರ ಕಲಾ ಪ್ರೌಢಿಮೆ ಯನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಂತಿಮತೀ ಪ್ರತಿಷ್ಠಾನ ದ ಅಧ್ಯಕ್ಷ ಚಂದ್ರಶೇಖರ ಅಡಿಗ, ಹಿರೀಯ ಛಾಯಾಗ್ರಾಹಕ ನಾಗರಾಜ ವಾರಂಬಳ್ಳಿ ,ಮಟಪಾಡಿ ಶಾಲಾ ಶಿಕ್ಷಕ ಹರಿಕೃಷ್ಣ ಹೊಳ್ಳ, ಪ್ರಸನ್ನ ಭಟ್, ವಿದ್ವಾನ್ ಡಾ. ವಿಜಯ ಮಂಜರ್ , ರಾಮಚಂದ್ರ ಉಡುಪ ಬಾರ್ಕೂರು ,ನಳಿನಿ ಪ್ರದೀಪ್ ರಾವ್ ,ವನಿತಾ ಉಪಾಧ್ಯಾಯ , ಲಕ್ಷ್ಮೀ ಜಿ,ಭಟ್ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

24/09/2022 06:34 pm

Cinque Terre

2.24 K

Cinque Terre

0

ಸಂಬಂಧಿತ ಸುದ್ದಿ