ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೃಹತ್ ಆಧಾರ್ ನೋಂದಾಣಿ ಮತ್ತು ತಿದ್ದುಪಡಿ ಅಭಿಯಾನ

ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರ, ಸಮಾಜ ಮಂದಿರ ಮೂಡುಬಿದಿರೆ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಭಾಗಿತ್ವದಲ್ಲಿ ಶುಕ್ರವಾರ ಸ್ವರ್ಣ ಮಂದಿರದಲ್ಲಿ ನಡೆದ ಬೃಹತ್ ಆಧಾರ್ ನೋಂದಾಣಿ ಮತ್ತು ತಿದ್ದುಪಡಿ ಅಭಿಯಾನ ಕಾರ್ಯಕ್ರಮವನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀಪತಿ ಭಟ್ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್. ಎಂ ಮಾತನಾಡಿ, ಆಧಾರ್ ನೋಂದಾಣಿ ಆರಂಭವಾಗಿ ಹಲವು ವರ್ಷಗಳಾದರೂ ಕೂಡ ಇಂದು ಆಧಾರ್ ನೋಂದಣಿಗೆ ಜನರು ಸರದಿಯಲ್ಲಿ ಬರುತ್ತಿರುವುದನ್ನು ನೋಡಿದರೆ ಸರಕಾರದ ಯೋಜನೆಗಳು ಇನ್ನೂ ಜನಸಾಮಾನ್ಯರಿಗೆ ತಲುಪಿಲ್ಲ ಎಂಬುದನ್ನು ಅರಿಯಬಹುದು.ಸರ್ಕಾರದ ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಜನಸಾಮಾನ್ಯರು ಪಡೆಯಬೇಕೆಂಬ ಉದ್ದೇಶದಿಂದ ಪವರ್ ಫ್ರೆಂಡ್ಸ್ ತಂಡವು ಉತ್ತಮ ಸಮಾಜಮುಖಿ ಕೆಲಸವನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ,ಕಷ್ಟದಲ್ಲಿರುವವರು ಯಾರೇ ಆಗಲಿ ಅವರ ಜಾತಿ, ಧರ್ಮವನ್ನು ನೋಡದೇ ಅವರ ನೋವಿಗೆ ಸ್ಪಂದಿಸಬೇಕು. ಅಂತಹ ಉತ್ತಮ ಕೆಲಸವನ್ನು ಪವರ್ ಫ್ರೆಂಡ್ಸ್ ಬೆದ್ರ ತಂಡವು ಮಾಡುತ್ತಿದೆ. ಈ ತಂಡದಿಂದ ಇನ್ನಷ್ಟು ಸಮಾಜಕ್ಕೆ ಉತ್ತಮ ಕಾರ್ಯಕ್ರಮಗಳು ಮೂಡಿ ಬರಲಿ ಎಂದ ಅವರು ಇವರ ಸಮಾಜಮುಖಿ ಕಾರ್ಯವು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಲಿ ಎಂದು ಶುಭಹಾರೈಸಿದರು.

ಪುತ್ತೂರು ಅಂಚೆ ವಿಭಾಗದ ಐ.ಪಿ.ಓ.ಎಸ್, ಹಿರಿಯ ಅಂಚೆ ಅಧೀಕ್ಷಕಿ ಡಾ.ಏಂಜಲ್ ರಾಜ್, ಉದ್ಯಮಿ ದಿವಾಕರ್ ಶೆಟ್ಟಿ ಮಾತನಾಡಿ ಪವರ್ ಫ್ರೆಂಡ್ಸ್ ಹಾಗೂ ತಂಡದ ಎಲ್ಲಾ ಸದಸ್ಯರಿಗೂ ಅಭಿನಂದನೆಯನ್ನು ಸೂಚಿಸಿದರು.ಪವರ್ ಫ್ರೆಂಡ್ಸ್ ಬೆದ್ರ ಇದರ ಅಧ್ಯಕ್ಷ ವಿನಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸುರೇಶ್ ಪ್ರಭು, ಬಂಟ್ವಾಳ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಲೋಕ್ ನಾಥ್ ಎಂ ಪುತ್ತೂರು ವಿಭಾಗದ ಮಾರ್ಕೆಟಿಂಗ್ ಅಧಿಕಾರಿ ಗುರುಪ್ರಸಾದ್, ಮೂಡುಬಿದಿರೆ ಅಂಚೆಪಾಲಕಿ ಉಷಾ,

ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಂಚಾಲಕ ರಾಜಾರಾಮ್, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಸುಶೀಲ ಮತ್ತಿತರರು ಉಪಸ್ಥಿತರಿದ್ದರು.

ಪವರ್ ಫ್ರೆಂಡ್ಸ್ ಬೆದ್ರ ತಂಡದ ಉಪಾಧ್ಯಕ್ಷ ಜಯಪ್ರಕಾಶ್ ಭಂಡಾರಿ ಸ್ವಾಗತಿಸಿ,ಪುತ್ತೂರು ಅಂಚೆ ವಿಭಾಗೀಯ ತರಬೇತುದಾರ ರೋಹನ್ ಲೂಯಿಸ್ ನಿರೂಪಿಸಿದರು.ಪವರ್ ಫ್ರೆಂಡ್ಸ್ ನ ಪ್ರಧಾನ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಧನ್ಯವಾದಗೈದರು

Edited By : PublicNext Desk
Kshetra Samachara

Kshetra Samachara

23/09/2022 05:33 pm

Cinque Terre

2.83 K

Cinque Terre

0

ಸಂಬಂಧಿತ ಸುದ್ದಿ