ಮೂಡುಬಿದಿರೆ:ಜಿಲ್ಲಾಪಂಚಾಯತ್ ಮಂಗಳೂರು, ದ.ಕ ಜಿಲ್ಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಛೇರಿ ಮಂಗಳೂರು, ಜಿಲ್ಲಾಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಛೇರಿ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ ಹಾಗೂ ಜೆಸಿಐ ತ್ರಿಭುವನ್ ಮೂಡುಬಿದಿರೆ, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‌ಟೌನ್, ರೋಟರಿ ಕ್ಲಬ್ ಮೂಡುಬಿದಿರೆ , ವಿನ್ಸೆಂಟ್ ಕುಟಿನ್ಹಾ( ಅನುಪಮಾ ಫೀಡ್ಸ್ & ಫಾರ್ಮ್ ಐಡಿಯಲ್ ಚಿಕನ್ ಮೂಡುಬಿದಿರೆ, ಲಯನ್ಸ್ ಕ್ಲಬ್ ಅಲಂಗಾರ್ ಇವುಗಳ ಸಹಭಾಗಿತ್ವದಲ್ಲಿ "ನಿಕ್ಷಯ್ ಮಿತ್ರ" ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮವು ಸಮಾಜಮಂದಿರದಲ್ಲಿ ಕ್ಷಯಾರೋಗ ನಿಯಂತ್ರಣಾಧಿಕಾರಿ ಬದ್ರುದ್ದೀನ್ ಉದ್ಘಾಟಿಸಿದರು.
ನಂತರ ಕ್ಷಯಾ ರೋಗಿಗಳಿಗೆ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರೆಲ್ಲಾ ಸೇರಿ ಒಬ್ಬ-ಒಬ್ಬರ ಕ್ಷಯಾ ರೋಗಿಗಳ ವರ್ಷದ ಆಹಾರ ಸೇವನೆಯ ದಿನಸಿ ಸಾಮಾಗ್ರಿಗಳನ್ನು ನೀಡುವ ಜಾವಬ್ದಾರಿಯನ್ನು ಹೊತ್ತು ಕ್ಷಯಾ ರೋಗಿಗಳಿಗೆ ಆಹಾರ ಸಾಮಾಗ್ರಿಯನ್ನು ವಿತರಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಬದ್ರುದ್ದಿನ್ ಈ ಸಂದರ್ಭದಲ್ಲಿ ಜೆಸಿಐ ಅಧ್ಯಕ್ಷೆ ಶಾಂತಲಾ, ಮೂಡುಬಿದಿರೆ ರೋಟರಿ ಕ್ಲಬ್‌ನ ಅಧ್ಯಕ್ಷ ಮಹಮ್ಮದ್ ಆರೀಫ್, ಆರೋಗ್ಯ ಮೇಲ್ವಿಚಾರಕಿ ಸುಶೀಲಾ, ಸರ್ಕಾರಿ ನೌಕರರ ಅಧ್ಯಕ್ಷ ನಾಗೇಶ್ ಕುಮಾರ್, ರೋಟರಿ ಕ್ಲಬ್‌ನ ಪ್ರಫುಲ್ ಕುಮಾರ್,ವಿನ್ಸೆಂಟ್ ಕುಟಿನ್ಹಾ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಚಿತ್ರಾ, ಮೂಡುಬಿದಿರೆ ಟೆಂಪಲ್ ಟೌನ್ ನ ಹರೀಶ್ ಎಂ.ಕೆ, ಕಾರ್ಯದರ್ಶಿ ಅಮರ್ ದೀಪ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಪಲ್ಲವಿ ಕ್ಷಯರೋಗ ಲಕ್ಷಣಗಳ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.
Kshetra Samachara
22/09/2022 04:18 pm