ಉಳ್ಳಾಲ: ಉಳ್ಳಾಲ ನಗರಸಭೆಯಲ್ಲಿ ತೆರಿಗೆ ಹಣ,ಡೋರ್ ನಂಬರ್ ನೀಡೋ ಪ್ರಕ್ರಿಯೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ನಗರಸಭೆ ಕಛೇರಿಯೊಳಗಡೆ ಅರೆ ನಗ್ನವಾಗಿ ಪ್ರತಿಭಟನೆ ನಡೆಸಿದ ಆಡಳಿತರೂಢ ಕಾಂಗ್ರೆಸ್ ಪಕ್ಷದ ಕೌನ್ಸಿಲರ್ ರವಿಚಂದ್ರ ಗಟ್ಟಿ ವಿರುದ್ಧ ಕೈ ನಾಯಕರು ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ತೊಕ್ಕೊಟ್ಟಿನಲ್ಲಿ ಉಳ್ಳಾಲ ನಗರಸಭೆಯ ಆಡಳಿತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು,ಸದಸ್ಯರು ಮತ್ತು ಪ್ರಮುಖರು ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಕಾಂಗ್ರೆಸ್ ವಕ್ತಾರ ದಿನೇಶ್ ರೈ ಮಾತನಾಡಿ ಆಡಳಿತ ಪಕ್ಷದ ಕೌನ್ಸಿಲರ್ ರವಿ ಗಟ್ಟಿ ಅವರು ತನ್ನ ವಾರ್ಡ್ ನ ಕಾಮಗಾರಿ ನಡೆದಿಲ್ಲವೆಂದು ಆರೋಪಿಸಿ ಮದ್ಯ ಸೇವಿಸಿ ಅರೆನಗ್ನವಾಗಿ ಪ್ರತಿಭಟಿಸಿದ ರೀತಿ ತಪ್ಪು.ಅವರ ಸಮಸ್ಯೆಯನ್ನು ನಗರಸಭೆ ಅಧ್ಯಕ್ಷರು,ಪಕ್ಷದ ಮುಖಂಡರ ಜೊತೆ ಹೇಳಬಹುದಿತ್ತು.
ಇಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ತಪ್ಪು ಸಂದೇಶ ನೀಡಿದಂತಾಗುತ್ತದೆ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬೆಂಗಳೂರಿಗೆ ತೆರಳಿದ್ದು ಅವರು ವಾಪಾಸಾದ ಮೇಲೆ ರವಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದರು.ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Kshetra Samachara
20/09/2022 10:33 pm