ಮೂಡುಬಿದಿರೆ: ಸೌಟ್ಸ್‌ಗೆಡ್ಸ್‌ನ ವಿಶ್ವ ಸಾಂಸ್ಕೃತಿಕೋತ್ಸವ ಜಾಂಬೂರಿಯು ಡಿ 21 ರಿಂದ 26 ರವರೆಗೆ ಮೂಡುಬಿದಿರೆಯಲ್ಲಿ ನಡೆಯಲಿದೆ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಈ ಜಾಂಬೂರಿಯಲ್ಲಿ ದೇಶ ವಿದೇಶಗಳಿಂದ 50 ಸಾವಿರದಷ್ಟು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ಈ ಬೃಹತ್ ಕಾರ್ಯಕ್ರಮದಲ್ಲಿ ದೇಶದ ಕಲೆ ಸಂಸ್ಕೃತಿಯನ್ನು ಪರಿಚಯಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ವಿಶ್ವ ಜಾಂಬೂರಿಯ ಉತ್ಸವದಂಗವಾಗಿ ಶನಿವಾರ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಕಾರ್ಯಕ್ರಮದ ಕುರಿತು ಸಮಗ್ರ ಮಾಹಿತಿ ನೀಡಿ ಅವರು ಮಾತನಾಡಿದರು. ಈ ಉತ್ಸವದಲ್ಲಿ ಮಕ್ಕಳಿಗೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುವುದು, ಯೋಗ ಮತ್ತು ಧ್ಯಾನಕ್ಕೆ ಒತ್ತು, ಮಕ್ಕ ಕೃಷಿ ಮೇಳವನ್ನು ಆಯೋಜಿಸಿದ್ದು ಕೃಷಿಯ ಸಮಗ್ರ ದರ್ಶನ ಮಾಡಲಾಗುವುದು. ಬೃಹತ್ ಮಸ್ತಕ ಮೇಳ, ಕಲಾ ಮೇಳ, ಆಹಾರೋತ್ಸವ ಮತ್ತಿತರ ಚಟುವಟಿಕೆಗಳು ನಡೆಯಲಿವೆ. ಇದರ ಯಶಸ್ಸಿಗಾಗಿ ಸುಮಾರು ೨೮ ಕಮಿಟಿಗಳನ್ನು ರಚಿಸಲಿದ್ದು ಆಸಕ್ತರು ಇದರಲ್ಲಿ ಸ್ವಯಂಸೇವಕರಾಗಿ ತೊಡಗಿಸಿಕೊಳ್ಳುವ ಮೂಲಕ ತಮ್ಮದಾದ ಸೇವೆಯನ್ನು ಸಲ್ಲಿಸಬಹುದು. ಜಿಲ್ಲೆಗೆ ದೊರೆತ ಈ ಅಪರೂಪದ ಅವಕಾಶದಲ್ಲಿ ತಮ್ಮ ಅಳಿಲು ಸೇವೆ ಸಲ್ಲಿಸಬೇಕು ಸಂಪನ್ಮೂಲ ಕ್ರೋಡಿಕರಣಕ್ಕೂ ಸಹಕರಿಸಬೇಕು, ಈ ಉತ್ಸವದ ನೆನಪಿನಲ್ಲಿ ಪಿಲಿಕುಳದಲ್ಲಿ ಯುವಕೇಂದ್ರ ಸ್ಥಾಪನೆ ಸೇರಿದಂತೆ ಹಲವಾರು ಶಾಶ್ವತ ಯೋಜನೆಗಳನ್ನು ರೂಪಿಸುವ ಉದ್ದೇಶ ಹೊಂದಿರುವುದಾಗಿ ಅವರು ತಿಳಿಸಿದರು.
ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಚೌಟರ ಅರಮನೆಯ ಕುಲದೀಪ ಎಂ, ಹಿರಿಯ ನ್ಯಾಯವಾದಿ ಕೆ.ಆರ್.ಪಂಡಿತ್, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ ಎಂ, ವೃತ್ತ ನಿರೀಕ್ಷಕ ನಿರಂಜನ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್, ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ಸಂಪತ್ ಸಾಮ್ರಾಜ್ಯ, ಉದ್ಯಮಿ ಸಿ.ಎಚ್.ಗ ಫೂರ್, ಆಳ್ವಾಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಹರೀಶ್ ನಾಯಕ್, ರೋಟರಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಪ್ರವೀಣ್‌ಚಂದ್ರ ಜೈನ್, ನಿವೃತ್ತ ಶಿಕ್ಷಕರಾದ ಜ್ಞಾನಚಂದ್ರ, ಗುಣ ಪಾಲ ಕಡಂಬ, ಅರ್ಚಕ ಸುಬ್ರಹ್ಮಣ್ಯ ಭಟ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Kshetra Samachara
10/09/2022 08:43 pm