ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಘನತ್ಯಾಜ್ಯ ನಿರ್ವಹಣಿಗೆ ಮೂಡುಬಿದಿರೆ ಪುರಸಭೆಯಿಂದ 6 ಪಿಕ್‌ಅಪ್‌ ವಾಹನ ಲೋಕಾರ್ಪಣೆ

ಮೂಡುಬಿದಿರೆ: ಇಲ್ಲಿನ ಪುರಸಭೆಯು ಸ್ವಚ್ಛ ಭಾರತ್ ಮಿಷನ್(ನಗರ) ಯೋಜ ನೆಯ ಘನತ್ಯಾಜ್ಯ ನಿರ್ವಹಣಿ ಅನುದಾನದಡಿ ಮೂಡುಜದಿರ ಪುರಸಭಾ ವ್ಯಾಪ್ತಿಯಲ್ಲಿ ಮನೆ ಮನೆ ವಿಂಗಡಿತ ಕಸ ಸಂಗ್ರಹಣೆಗೆ 1.7 ಟನ್ ಕನಿಷ್ಠ ಸಾಮರ್ಥ್ಯದ 6ಪಿಕ್‌ಅ ಪ್ ವಾಹನಗಳನ್ನು ಖರೀದಿಸಿದ್ದು ಇದನ್ನು ಶಾಸಕ ಉಮಾನಾಥ ಕೋಟ್ಯಾನ್‌ ಶುಕ್ರವಾರ ಹಸಿದು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕ ಕೋಟ್ಯಾನ್‌, ಮೂಡುಬಿದಿರೆ ಪುರಸಭೆಯು ಮನೆ ಮ ನ ವಿಂಗಡಿತ ಕಸ ಸಂರಹಣಿಗೆ 2 ಪಿಕ್‌ಅಪ್‌ ವಾಹನಗಳನ್ನು ಖರೀದಿಸಿದ್ದು ಇದು ಅ ನಗರ ಸೇವೆಗಾಗಿ ಲೋಕಾರ್ಪಣಿಗೊಂಡಿದೆ. ರೂ. 66,42,102.00ವೆಚ್ಚ ಈ ವಾಹ ನಗಳಗೆ ತಗಲಿದ್ದು, ಇದು ಪುರಸಭೆಯ ಸ್ವಂತ ಆಸ್ತಿಯಾಗಿದೆ. ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ಎಲ್ಲೂ ಕಸಕಡ್ಡಿಗಳು ಕಾಣದಂತೆ ಮತ್ತು ತ್ಯಾಜ್ಯವನ್ನು ಕಂಟ್ರೋಲ್‌ಗೆ ತರಬೇಕೆಂಬ ಉದ್ದೇಶದಂತೆ ಹಾಗೂ ಸ್ವಚ್ಛ ಭಾರತದ ಕಲ್ಪನೆಯೊಂದಿಗೆ ಕೆಲಸ ಮಾಡಲು ದುರಸಭೆಯು ಕ್ರಮ ಕೈಗೊಂಡಿದ್ದು ಇದು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಮರಸಭಾ ಅಧ್ಯಕ್ಷ ಪ್ರಸಾದ್‌ ಕುಮಾರ್‌ ಮಾತನಾಡಿ ಘನತ್ಯಾಜ್ಯ ನಿರ್ವಹಣಿಗಾಗಿ 2 ಏಕ್‌ಅಪ್ ವಾಹನಗಳನ್ನು ಖರೀದಿಸಲಾಗಿದ್ದು ಇದಕ್ಕೆ ಕೇಂದ್ರ ಸರಕಾರವು ರೂ 23,75,575, ರಾಜ್ಯ ಸರಕಾರವು 15, 83,490 ಹಾಗೂ ಪುರಸಭೆಯು 26,83,067 ಅನುದಾನವನ್ನು ನೀಡಿದೆ. ಇದು ನಮ್ಮ ದೇಶದಲ್ಲಿ ಪ್ರಥಮವಾಗಿ ಮೂಡುಬಿದಿರೆ ಮರಸಭೆಗೆ ಬಂದಂಹ ವಾಹನಗಳು ಹಿಂದೆ ಕಸವನ್ನು ಯಾರ್ಡ್‌ಗಳಲ್ಲೇ ವಿಂಗಡನೆ ಮಾಡುತ್ತಿದ್ದರು ಆದರೆ ಈಗ ಖರೀದಿಸಿರುವ ವಾಹನಗಳಲ್ಲೇ ಕಸ ವಿಂಗಡನೆ ಮಾಡುವಂತಹ ಕಂಪಾರ್ಟ್‌ಮೆಂಟ್‌ಗಳಿವೆ. ನಾವು ಮೂಲದಲ್ಲಿಯೇ ಕಸವನ್ನು ವಿಂಗಡಿಸಿ ತರುವಂತಹ ಕೆಲಸಕ್ಕೆ ಕೈ ಹಾಕಿದ್ದೇವೆ. ಕಸವನ್ನು ನೀಡುವಲ್ಲಿಯೇ ವಿಂಗಡನೆ ಆಗುತ್ತಿದೆ ಇದಕ್ಕೆ ಮೂಡುಬಿದಿರೆಯ ಜನತೆಯು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯರಾದ ದಿವ್ಯಾ ಜಗದೀಶ್‌, ಪುರಂದರ ದೇವಾಡಿಗ, ನಾಮ ನಿರ್ದೇಶಿತ ಸದಸ್ಯರಾದ ದಿನೇಶ್ ಮಾರೂರು, ಗಿರೀಶ್‌ ಕುಮಾರ್, ರಾಘವ ಹೆಗ್ಡೆ, ಮುಖ್ಯಾಧಿಕಾರಿ ಇಂದು ಎಂ., ಪರಿಸರ ಅಭಿಯಂತರೆ ಶಿಲ್ಪಾ ಮತ್ತಿತರರು ಈ ಸಂದರ್ಭದಲ್ಲಿದ್ದರು.

Edited By : PublicNext Desk
Kshetra Samachara

Kshetra Samachara

09/09/2022 08:16 pm

Cinque Terre

1.87 K

Cinque Terre

0

ಸಂಬಂಧಿತ ಸುದ್ದಿ